Sunday, December 22, 2024

ನಾನು ಕರ್ನಾಟಕ ಬಿಟ್ಟು ಹೋಗಲ್ಲ, ಇಲ್ಲೇ ಇರ್ತೀನಿ : ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಹಾಸನ : ನಾನು ಕರ್ನಾಟಕ ಬಿಟ್ಟು ಹೋಗಲ್ಲ, ಕರ್ನಾಟಕದಲ್ಲೇ ಇರ್ತೀನಿ ಎನ್ನುವ ಮೂಲಕ ಬಿಜೆಪಿ ಹೈಕಮಾಂಡ್​ನಿಂದ ತಮಗೆ ಮಂತ್ರಿಗಿರಿ ಆಫರ್ ಬಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ​ಸ್ಪಷ್ಟಪಡಿಸಿದರು.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ತಾವು ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಸ್ಪರ್ಧಿಸಲ್ಲ ಎಂದರು.

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಎಲ್ಲಾ ಕಡೆ ಪ್ರೀತಿಯಿಂದ ಹೇಳ್ತಾರೆ. ಸದ್ಯಕ್ಕೆ ರಾಜ್ಯದ ಕೆಲಸ ಮುಗಿಯಲಿ. ರಾಜ್ಯದ ಜನತೆಯ ಹಲವಾರು ಸಮಸ್ಯೆಗಳಿವೆ. ಆ ಸಮಸ್ಯೆಗಳಿಗೆ ಮೊದಲು ಪರಿಹಾರ ದೊರಕಬೇಕು ಎಂದು ಹೇಳಿದರು.

ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿಯೇ ಇರ್ತಾರೆ

ಹಾಸನದಲ್ಲಿ ಜನತಾದಳದ ಅಭ್ಯರ್ಥಿ, ಮೈತ್ರಿಯ ಎನ್‌ಡಿಎ ಅಭ್ಯರ್ಥಿಯೇ ಇರ್ತಾರೆ. ದೆಹಲಿಯ ಹೈಕಮಾಂಡ್ ನಾವೆಲ್ಲಾ ಕುಳಿತು ಚರ್ಚೆ ಮಾಡ್ತಿವಿ. ಚರ್ಚೆ ಮಾಡಿ ತೀರ್ಮಾನ ಮಾಡ್ತಿವಿ. ದೇವೇಗೌಡರು ನಮ್ಮ ಪಕ್ಷದ ಹೈಕಮಾಂಡ್. ಅವರು ಈಗಾಗಲೇ ಅವರ ಭಾವನೆ ಹೇಳಿದ್ದಾರೆ. ಹೀಗೆ ಆಗುತ್ತೆ, ಹಾಗೆ ಆಗುತ್ತೆ ಅಂತ ಹೇಳಲು ಆಗಲ್ಲ ಎಂದು ತಿಳಿಸಿದರು.

ಜನರ ಅಭಿಪ್ರಾಯ ಏನಿದೆ? ಅವ್ರು ಏನು ಬಯಸುತ್ತಾರೆ?

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಜನಗಳ ಅಭಿಪ್ರಾಯ ಏನಿದೆ? ಜನ ಏನು ಬಯಸುತ್ತಾರೆ? ಅದನ್ನು ಮಾಡ್ತಿವಿ. ಜನಾಭಿಪ್ರಾಯಕ್ಕೆ ಏನು ತೀರ್ಮಾನ ಮಾಡಬೇಕು ಮಾಡ್ತಿವಿ. ಈಗ ಮೈತ್ರಿಯ ವಾತಾವರಣ ಏನಿದೆ, ಎಲ್ಲರ ಅಭಿಪ್ರಾಯ ತಗೊಂಡು ತೀರ್ಮಾನ ಮಾಡ್ತಿವಿ ಎಂದು ಕುಮಾರಸ್ವಾಮಿ ಹೇಳಿದರು.

RELATED ARTICLES

Related Articles

TRENDING ARTICLES