Wednesday, January 22, 2025

ಸಿದ್ಧಗಂಗಾ ಮಠಕ್ಕೆ ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್ ಭೇಟಿ

ತುಮಕೂರು : ಭಾರತೀಯ‌ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟಿಗ, ಕನ್ನಡಿಗ ಕೆ.ಎಲ್. ರಾಹುಲ್‌‌ ಅವರು ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು.

ಕುಟುಂಬ ಸಮೇತ ಇಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದರು. ಧ್ಯಾನ ಮಂದಿರಕ್ಕೆ ತೆರಳಿ ಕೆಲಕಾಲ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳನ್ನು ಭೇಟಿ ಮಾಡಿ, ಆಶೀರ್ವಾದ ಪಡೆದರು. ಇದೇ ವೇಳೆ ಸಂಜೆಯ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿ, ಶ್ರೀ ಮಠದ ಮಕ್ಕಳನ್ನುದ್ದೇಶಿಸಿ ಮಾತನಾಡಿದರು.

ತಂದೆ ಲೋಕೇಶ್ ಹಾಗೂ ತಾಯಿ ಲೋಕೇಶ್ವರಿ ಅವರೊಂದಿಗೆ ಮಠಕ್ಕೆ ಆಗಮಿಸಿದ ಸುದ್ದಿ ತಿಳಿದ ಶ್ರೀಮಠದ ಮಕ್ಕಳು, ರಾಹುಲ್​ ಅವರನ್ನು ನೋಡಲು ಮುಗಿಬಿದ್ದರು. ಈ ವೇಳೆ ಭಕ್ತರು ಹಾಗೂ ಮಕ್ಕಳನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.

ರಾಹುಲ್ ಸಿದ್ಧಗಂಗಾ ಮಠದ ಭಕ್ತರು

ಕೆ.ಎಲ್. ರಾಹುಲ್ ಅವರು ಮಾಗಡಿ ತಾಲೂಕಿನ ಕಣ್ಣೂರಿನವರಾಗಿದ್ದು, ಸಿದ್ದಗಂಗಾ ಮಠದ ಭಕ್ತರಾಗಿದ್ದಾರೆ. ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಸ್ಥಳವೂ ರಾಮನಗರ ಜಿಲ್ಲೆಯೇ ಆಗಿದೆ. ರಾಹುಲ್ ಅವರ ಪ್ರತಿಭೆಯನ್ನು ಸಿದ್ದಲಿಂಗ ಶ್ರಿಗಳು ಪ್ರಶಂಸಿಸಿ ಆರ್ಶೀವಾದ ಮಾಡಿದ್ದಾರೆ.

RELATED ARTICLES

Related Articles

TRENDING ARTICLES