Monday, December 16, 2024

ಬಿಜೆಪಿ ಅನ್ವರ್ಥನಾಮ ಸುಳ್ಳು, ಸುಳ್ಳಿನ ಪಾರ್ಟಿ ಅಂದ್ರೆ ಬಿಜೆಪಿ : ಸಿದ್ದರಾಮಯ್ಯ

ಮಂಡ್ಯ : ಬಿಜೆಪಿಯ ಅನ್ವರ್ಥನಾಮ ಸುಳ್ಳು, ಸುಳ್ಳಿನ ಪಾರ್ಟಿ ಯಾವುದು ಅಂದರೆ ಬಿಜೆಪಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದರು.

ಮಂಡ್ಯದ ಮಳವಳ್ಳಿಯಲ್ಲಿ ನಡೆದ ‘ಗ್ಯಾರಂಟಿ’ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ಸುಳ್ಳು ಹೇಳಿದ ಪ್ರಧಾನಿ ಯಾರು ಅಂದರೆ ಅದು ನರೇಂದ್ರ ಮೋದಿ ಎಂದು ಟೀಕಿಸಿದರು.

ಬಿಜೆಪಿ, ಜೆಡಿಎಸ್‌ನವರ ರೀತಿ ಸುಳ್ಳು ಹೇಳಬೇಡಿ. ಕುಮಾರಸ್ವಾಮಿ ಎರಡು ಸಲ, ದೇವೇಗೌಡರು ಸಹ ಸಿಎಂ ಆಗಿದ್ರು. ಮಳವಳ್ಳಿಗೆ ನಿಮ್ಮ ಕೊಡುಗೆ ಏನು ಹೇಳಿ. ಬಿಜೆಪಿಯ ಕೊಡುಗೆ ಏನು ಹೇಳಿ. ನರೇಂದ್ರಸ್ವಾಮಿ ಹೇಳಿದ್ದನ್ನೆಲ್ಲ ಮಾಡಿಕೊಟ್ಟಿದ್ದೆ. ಏನು ಮಾಡದವರಿಗೆ ಮತ ಕೊಡಬೇಕಾ? ಎಂದು ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಸಹ ಇವ್ರ ಜೊತೆ ಸೇರಿದ್ದಾರೆ

15 ಲಕ್ಷ ಬಂತಾ..? 2 ಕೋಟಿ ಉದ್ಯೋಗ ಕೊಟ್ರಾ..? ಅಚ್ಛೇ ದಿನ್,, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಆಯ್ತಾ..? ನಾವು ಎಲ್ಲಾ ವರ್ಗ, ಸಮಾಜಕ್ಕೂ ಸಮವಾಗಿ ಅನುದಾನ ಕೊಡ್ತೀವಿ. ತೆರಿಗೆ ವಿಚಾರದಲ್ಲಿ ಅನ್ಯಾಯ ಆಗಿದೆ ಅಂತ ನಾವು ಹೇಳ್ತಿದ್ದೇವೆ. ಕೇಂದ್ರ ಹೇಳುವ ಸುಳ್ಳನ್ನೇ ಇವರು ಹೇಳ್ತಾರೆ. ಇವರ ಜೊತೆಗೆ ಕುಮಾರಸ್ವಾಮಿ ಸಹ ಸೇರಿದ್ದಾರೆ ಎಂದು ಚಾಟಿ ಬೀಸಿದರು.

ಲೋಕಸಭೆಯಲ್ಲಿ ಜೆಡಿಎಸ್‌, ಬಿಜೆಪಿ ಸೋಲಿಸಿ

100 ರೂಪಾಯಿಗೆ ನಮಗೆ ಸಿಕ್ತೀರೋದು ಬರೀ 13 ರೂ. ಮಾತ್ರ. ಈ ರೀತಿಯ ತೆರಿಗೆ ಅನ್ಯಾಯ ಆಗ್ತಿದೆ ಅಂದ್ರೆ ತಪ್ಪಾ? ನಮಗೆ ಅನ್ಯಾಯ ಆಗ್ತಿದೆ. ಕರ್ನಾಟಕದವರಿಗೆ ಸರಿಯಾಗಿ ತೆರಿಗೆ ಪಾಲು ಕೊಡ್ತಿಲ್ಲ. ಇದು ಕನ್ನಡಿಗರಿಗೆ ಮಾಡಿದ ದ್ರೋಹ ಅಲ್ವಾ? ಈ ಅನ್ಯಾಯದ ವಿರುದ್ಧ ಹೋರಾಟ ಮಾಡೋದು ಬೇಡ್ವಾ? ಈ ಅನ್ಯಾಯ ಸರಿಪಡಿಸಬೇಕು ಅಂದ್ರೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌, ಬಿಜೆಪಿ ಸೋಲಿಸಿ. ಈ ಹಿಂದಿನಂತೆ ಮುಂದೆಯೂ ನಮಗೆ ಆಶೀರ್ವದಿಸಿ ಎಂದು ಸಿದ್ದರಾಮಯ್ಯ ಹೇಳಿದರು.

RELATED ARTICLES

Related Articles

TRENDING ARTICLES