ತುಮಕೂರು: ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮಗ ಗೃಹಬಂಧನದಲ್ಲಿಟ್ಟಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ 11 ತಿಂಗಳಿನಿಂದ ಮಗ ಸೊಸೆ ಸೇರಿ ಹೆತ್ತ ತಾಯಿಯೇ ಬಂದನದಲ್ಲಿಟ್ಟಿದ್ದ ತುಮಕೂರಿನ ಶಿರಾಗೇಟ್ ಬಳಿಯ ಸಾಡೇಪುರದಲ್ಲಿ ಘಟನೆ ನಡೆದಿದೆ.
ಪಂಕಜಾಕ್ಷಿ (80) ಸಂತೃಸ್ಥೆ ತಾಯಿ. ನಿವೃತ್ತ ಸಿಡಿಪಿಓ ಆಗಿರುವ ಪಂಕಜಾಕ್ಷೀಗೆ 12 ಮನೆಗಳು ಸೇರಿದಂತೆ ಒಟ್ಟು ಆಸ್ತಿಗೆ ಇವಳೇ ಯಾಜಮಾನಿಯಾಗಿದ್ದಳು.ಈಕೆಗೆ ನಾಲ್ವರು ಮಕ್ಕಳು. ಎಲ್ಲಾ ಆಸ್ತಿಯನ್ನು ತನ್ನ ಮಗಳಿಗೆ ಬರೆಯುತ್ತಲೇ ಎಂದು ತಿಳಿದ ಮಗ ಜೇಮ್ ಸುರೇಶ್ ಹಾಗೂ ಸೊಸೆ ಆಶಾ ಹೆತ್ತ ತಾಯಿಯನ್ನು ಕೆಳದ 11 ತಿಂಗಳಿದ ವೃದ್ದೆಗೆ ಬರುತ್ತಿದ್ದ 50 ಸಾವಿರ ಪೇನ್ಸನ್ ಹಣ ಒಡವೆಗಳನ್ನು ಕಿತ್ತುಕೊಂಡು ಕಿರುಕುಳ ನೀಡುತ್ತಿದ್ದರು.
ಇದನ್ನು ಗಮನಿಸಿದ ಸ್ಥಳೀಯರು ಸಾಂತ್ವನ ಕೇಂದ್ರ, ಸಖಿ ಕೇಂದ್ರ ಹಾಗೂ ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ತುಮಕೂರು ನಗರ ಪೊಲೀಸರು ಹಾಗೂ ಸಾಂತ್ವಾನ ಕೇಂದ್ರ ಅಧಿಕಾರಿಗಳು ಸ್ಥಳಕ್ಕಾಗಮಿಸಿದರು. ಮನೆಯೊಳಗೆ ಕೂಡಿಹಾಕಿದ್ದ ವೃದ್ಧೆಯನ್ನು ರಕ್ಷಿಸಿ ಸಾಂತ್ವಾನ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ವೃದ್ಧೆಯನ್ನು ಸಖಿ ಕೇಂದ್ರದಲ್ಲಿ ಎರಡು ದಿನ ಚಿಕಿತ್ಸೆ ಕೊಡಿಸಿದ್ದಾರೆ.
ಮಾಹಿತಿ ನೀಡಿದ್ದರೂ ಬಾರದ ಮಕ್ಕಳು!
ಪಂಕಜಾಕ್ಷಿ ಅವರಿಗೆ ನಾಲ್ವರು ಮಕ್ಕಳಿದ್ದಾರೆ. ಈ ವಿಷಯವನ್ನು ಅಧಿಕಾರಿಗಳು ಮಕ್ಕಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಮಕ್ಕಳು ಬಾರದ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೊರೆ ಹೋಗಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾರಿಗೆ ದೂರು ನೀಡಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಹಾಗೂ ಸಾಂತ್ವಾನ ಕೇಂದ್ರದ ಸಿಬ್ಬಂದಿ ವೃದ್ಧೆಯನ್ನು ಮನೆಗೆ ಕರೆದುಕೊಂಡು ಹೋಗಿ ವಾಪಸ್ ಬಿಟ್ಟಿದ್ದಾರೆ. ವೃದ್ಧ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುವಂತೆ ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ. ನ್ಯಾಯಾಧೀಶರ ಮುಂದೆ ನಾಲ್ವರು ಮಕ್ಕಳು ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆಯನ್ನು ನೀಡಿದ್ದಾರೆ. ಸದ್ಯ ನ್ಯಾಯಾಧೀಶರ ಮಧ್ಯಪ್ರವೇಶದಿಂದ ಪ್ರಕರಣವು ಇತ್ಯರ್ಥವಾಗಿದೆ.
ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.