Monday, January 27, 2025

ವಸತಿ ಕಾಲೋನಿ ಪ್ರದೇಶದಲ್ಲಿ ಹಳಿ ತಪ್ಪಿದ ಹತ್ತು ಬೋಗಿ; ರಕ್ಷಣಾ ಕಾರ್ಯಾಚರಣೆ

ನವದೆಹಲಿ: ದೆಹಲಿಯ ಸರೈ ರೋಹಿಲ್ಲಾದ ವಸತಿ ಕಾಲೋನಿ ಸಮೀಪ ರೈಲಿನ ಹತ್ತು ಬೋಗಿ ಹಳಿ ತಪ್ಪಿ ಬಿದ್ದಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.

ಉತ್ತರ ದೆಹಲಿಯ ಝಾಕ್ರಿಯಾ ಪ್ರೈಓವರ್ ಸಮೀಪದ ಪಟೇಲ್ ನಗರ್-ದಯಾಬಸ್ತಿ ಸೆಕ್ಸನ್ ಸ್ಥಳದಲ್ಲಿ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹತ್ತು ಬೋಗಿ ಹಳಿ ತಪ್ಪಿ ಬಿದ್ದಿರುವುದರ ಪರಿಣಾಮ ಪ್ರಯಾಣಿಕರು ಗಾಯಗೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದ್ದು,

ಈ ಬಗ್ಗೆ ಇನ್ನಷ್ಟೇ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಬೇಕಾಗಿದೆ ಎಂದು ವರದಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ ಘಟನಾ ಸ್ಥಳಕ್ಕೆ ರೈಲ್ವೆ ಮತ್ತು ಅಗ್ನಿಶಾಮಕ ದಳದ ಸಿಬಂದಿಗಳು ದೌಡಾಯಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ.

RELATED ARTICLES

Related Articles

TRENDING ARTICLES