Wednesday, December 18, 2024

ನ್ಯಾಷನಲ್​ ಮಾಸ್ಟರ್ಸ್​ ಅಥ್ಲೆಟಿಕ್ಸ್​ ನಲ್ಲಿ ಕರ್ನಾಟಕದ ಶಿಕ್ಷಕ ಮಲ್ಲಿಕಾರ್ಜುನಗೆ ಚಿನ್ನದ ಪದಕ!

ದೊಡ್ಡಬಳ್ಳಾಪುರ: ಮಹಾರಾಷ್ಟ್ರದ ಪುಣೆಯಲ್ಲಿ ಫೆ. 13 ರಿಂದ 17 ರ ವರೆಗೆ ನಡೆದ ನ್ಯಾಷನಲ್​ ಮಾಸ್ಟರ್ಸ್​ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​-2024 ರಲ್ಲಿ ಭಾಗವಹಿಸಿ ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ದೊಡ್ಡಬಳ್ಳಾಪುರದ ದೈಹಿಕ ಶಿಕ್ಷಕ ಚಿನ್ನದ ಪದಕ ಗೆಲ್ಲುವ ಮೂಲಕ ಸ್ವೀಡನ್​ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್​ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಇದನ್ನೂ ಓದಿ: ಡಿಕೆಸು ವಿರುದ್ಧ ಯಾರೇ ಸ್ಪರ್ಧಿಸಿದ್ರೂ ಚಿಂತೆಯಿಲ್ಲ: ಡಿ.ಕೆ ಶಿವಕುಮಾರ್

ಮಲ್ಲಿಕಾರ್ಜುನ ನಗರದ ಕಾರ್ಮೆಲ್​ ಜ್ಯೋತಿ ಶಾಲೆಯ ದೈಹಿಕ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದು ಜನವರಿ 6 ಮತ್ತು 7 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿನ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ನಡೆದ 44ನೇ ಸ್ಟೇಟ್​ ಮಾಸ್ಟರ್ಸ್​ ಅಥ್ಲೆಟಿಕ್ಸ್​ ಚಾಂಪಿಯನ್​ ಶಿಪ್​ -2024 ರಲ್ಲಿ 30 ವರ್ಷ ವಯೋಮಾನದ ವಿಭಾಗದಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು.

ಪುಣೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಜಾವಲಿನ್ ಥ್ರೋ ಕ್ರೀಡೆಯಲ್ಲಿ ಭಾಗವಹಿಸಿ ಬಂಗಾರದ ಪದಕ ಗಳಿಸಿದ್ದಾರೆ, 2024 ರ ಅಕ್ಟೋಬರ್ ನಲ್ಲಿ ಯುರೋಪ್ ನ ಸ್ವೀಡನ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕಟದಲ್ಲಿ ಭಾರತ ತಂಡ ದಿಂದ ಭಾಗವಹಿಸಲಿದ್ದಾರೆ. ಇವರ ಸಾಧನೆಗೆ ತಾಲೂಕಿನ ಶಿಕ್ಷಕರು ಹಾಗು ಜನತೆ ಶುಭಕೋರಿದ್ದಾರೆ.

RELATED ARTICLES

Related Articles

TRENDING ARTICLES