Thursday, January 23, 2025

ಕಲ್ಲಂಗಡಿ ತಿನ್ನಲು ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ, ಕೂದಲೆಳೆ ಅಂತರದಲ್ಲಿ ಪಾರಾದ ದಂಪತಿ

ಆನೇಕಲ್: ಒಂಟಿ ಸಲಗ ಗ್ರಾಮಕ್ಕೆ ನುಗ್ಗಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ರಾಜ್ಯ ಗಡಿಭಾಗದ ತಮಿಳುನಾಡಿನ ಡೆಂಕಣಿಕೋಟೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ  ದಂಪತಿ ಬಚಾವ್ ಆಗಿದ್ದು, ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಕಲ್ಲಂಗಡಿ ವ್ಯಾಪಾರಿಗಳು ಬದುಕುಳಿದಿದ್ದಾರೆ.

ಮುಂಜಾನೆ 5 ಗಂಟೆಯ ಸುಮಾರಿಗೆ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ ರಸ್ತೆ ಬದಿ ಕಲ್ಲಂಗಡಿ ಅಂಗಡಿ ಇದ್ದ ಸ್ಥಳಕ್ಕೆ ತೆರಳಿದೆ. ಕಲ್ಲಂಗಡಿ ಹಣ್ಣು ತಿನ್ನಲು ಅಂಗಡಿ ಕಡೆ ಆನೆ ತೆರಳಿದಾಗ, ಓಡಿ… ಓಡಿ… ಎಂದು ಗ್ರಾಮಸ್ಥರು ಕೂಗಿಕೊಂಡಿದ್ದಾರೆ. ಈ ವೇಳೆ ವ್ಯಾಪಾರಿ ಮತ್ತು ಆತನ ಪತ್ನಿ ಅಲ್ಲಿಂದ ಓಡಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ನಂತರ ಗ್ರಾಮದಲ್ಲಿ ಒಂಟಿ ಸಲಗ ಸಂಚರಿಸಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಸಿತು.

RELATED ARTICLES

Related Articles

TRENDING ARTICLES