ಜೈಪುರ : ಮೋದಿಯನ್ನು ವಿರೋಧಿಸುವುದೇ ಕಾಂಗ್ರೆಸ್ ನಾಯಕರ ಏಕೈಕ ಅಜೆಂಡಾ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.
ಜೈಪುರದಲ್ಲಿ ನಡೆದ ‘ವಿಕಸಿತ್ ಭಾರತ್, ವಿಕಾಸ್ ರಾಜಸ್ಥಾನ’ ಸಮಾರಂಭ ಹಾಗೂ 17 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಅಲ್ಲಿ ಸ್ವಜನ ಪಕ್ಷಪಾತ, ಉತ್ತರಾಧಿಕಾರ ರಾಜಕಾರಣ ಹೆಚ್ಚಿದ್ದು ಹಲವು ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಸಮಾಜವನ್ನು ಒಡೆಯುವುದೇ ಅವರ ಕೆಲಸ. ಯಾರ ಬಳಿ ಗ್ಯಾರಂಟಿ ನೀಡಲು ಏನೂ ಇಲ್ಲವೋ ಅವರ ಬಳಿ ಮೋದಿ ಗ್ಯಾರಂಟಿ ಇದೆ ಎಂದು ವಾಗ್ದಾಳಿ ನಡೆಸಿದರು.
ಏನು ಇಲ್ಲದವರಿಗೆ ಮೋದಿಯೇ ಗ್ಯಾರಂಟಿ
ಬ್ಯಾಂಕಿಗೆ ಗ್ಯಾರಂಟಿ ಒದಗಿಸಲು ರೈತರ ಬಳಿ ಏನೂ ಇರಲಿಲ್ಲ. ಆಗ ಮೋದಿ ಸರ್ಕಾರ ಕಿಸಾನ್ ಸಮ್ಮಾನ್ ನಿಧಿಯ ಮೂಲಕ 2,000 ರೂಪಾಯಿಗಳ ಗ್ಯಾರಂಟಿ ನೀಡಿದೆ. ದೇಶದ ಬಡವರು, ದಲಿತರು, ಒಬಿಸಿ ಸಮುದಾಯದ ಜನರಲ್ಲಿ ಬ್ಯಾಂಕಿಗೆ ಗ್ಯಾರಂಟಿ ನೀಡಲು ಏನೂ ಇರಲಿಲ್ಲ. ಮೋದಿ ಸರ್ಕಾರ ಅವರಿಗೆ ಮುದ್ರಾ ಸಾಲದ ಗ್ಯಾರಂಟಿ ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.