Thursday, December 19, 2024

ಡೆವಿಲ್ ಲುಕ್​ಗೆ ಫ್ಯಾನ್ಸ್ ಬೋಲ್ಡ್.. ತೂಗುದೀಪ ಶ್ರೀನಿವಾಸ್ ನೆನಪಿಸಿದ ‘ಡಿ’ ಬಾಸ್ ನಗು

ಬೆಂಗಳೂರು : ಸ್ಯಾಂಡಲ್​ವುಡ್​ನ ಹೆಸರಾಂತ ಖಳನಟ ತೂಗುದೀಪ ಶ್ರೀನಿವಾಸ್​ರ ಹಾವಭಾವ, ಡೈಲಾಗ್ ಡೆಲಿವರಿ, ಎಂದೂ ಮರೆಯೋಕೆ ಆಗದ ಆ ನಗು. ಆ ಎಲ್ಲವನ್ನೂ ನಟ ದರ್ಶನ್ ಡೆವಿಲ್ ಚಿತ್ರದಲ್ಲಿ ನೆನಪಿಸುವ ಕೆಲಸ ಮಾಡಿದ್ದಾರೆ. ನೆಗೆಟಿವ್ ಶೇಟ್ ಪಾತ್ರದಲ್ಲಿ ಅಪ್ಪನನ್ನು ಮೀರಿಸುವಂತೆ ಪರಕಾಯ ಪ್ರವೇಶ ಮಾಡಿದ್ದಾರೆ.

‘ಕಾಟೇರ’ ಬಿಗ್​ ಸಕ್ಸಸ್​ ನಂತರ ನಟ ದರ್ಶನ್ ಪ್ರಕಾಶ್ ವೀರ್ ನಿರ್ದೇಶನದಲ್ಲಿ ಡೆವಿಲ್ ಅವತಾರಲ್ಲಿ ನಟಿಸುತ್ತಿದ್ದಾರೆ. ಸದ್ಯ ಡಿ ಬಾಸ್ ಬರ್ತ್​ಡೇ ದಿನವೇ ಡೆವಿಲ್ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ಹೆಸರಿಗೆ ತಕ್ಕಂತೆ ಡೇರ್ ಡೆವಿಲ್ ಮೂಡಿಬಂದಿದೆ. ಅದರಲ್ಲೂ ದರ್ಶನ್ ನ್ಯೂ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಪಾಪು ಡೈಲಾಗ್, ಡೆವಿಲ್ ನಗು ಅಂತೂ ಫ್ಯಾನ್ಸ್ ನಡುವೆ ಕಿಚ್ಚು ಹತ್ತಿಸಿವೆ.

ಕಾಟೇರ ನಂತರ ಬರುತ್ತಿರುವ ಡಿ ಬಾಸ್ ನಟನೆಯ ಮೋಸ್ಟ್ ಅವೇಟೆಡ್ ಮೂವಿ ಡೆವಿಲ್. ಪ್ರಕಾಶ್ ನಿರ್ದೇಶನದಲ್ಲಿ ಜೈಮತಾ ಕಂಬೈನ್ಸ್ ಌಂಡ್ ವೈಷ್ಣೋ ಸ್ಟುಡಿಯೋಸ್ ನಿರ್ಮಾಣದಲ್ಲಿ ಡೆವಿಲ್ ರೆಡಿಯಾಗ್ತಾ ಇದೆ. ಸದ್ಯ ದರ್ಶನ್ ಬರ್ತ್​ಡೇ ದಿನವೇ ಡೆವಿಲ್ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದ್ದು, ದರ್ಶನ್ ಡೆವಿಲ್ ಅವತಾರ ನೋಡಿ ಫ್ಯಾನ್ಸ್ ಸ್ಟನ್ ಆಗಿದ್ದಾರೆ.

ಥೇಟ್ ತಂದೆ ತೂಗಣ್ಣನ ಖಳನಗು ನೆನಪು

ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು.. ಫೋಟೋ ತೆಗೆದರೆ ಅದಕ್ಕೆ ಕೋಪ ಬರುವುದು ಅಂತ ದರ್ಶನ್ ಹೇಳಿರೋ ಡೈಲಾಗ್ ಅಭಿಮಾನಿಗಳ ಮನಸ್ಸು ಗೆದ್ದಿದೆ. ಇದಕ್ಕೆ ಫ್ಯಾನ್ಸ್ ನಾನಾ ಅರ್ಥವನ್ನ ಊಹಿಸ್ತಾ ಇದ್ದಾರೆ. ಇನ್ನೂ ದರ್ಶನ್ ಗಹಿಗಹಿಸೋ ನಗೋದನ್ನ ನೋಡಿದವರಂತೂ ಥೇಟ್ ತೂಗುದೀಪ ಶ್ರೀನಿವಾಸ್​ರ ಖಳನಗುವನ್ನ ನೆನಪು ಮಾಡಿಕೊಳ್ತಾ ಇದ್ದಾರೆ.

ದಚ್ಚು ಫ್ಯಾನ್ಸ್​ಗೆ ಸಖತ್ ಕಿಕ್ ಕೊಟ್ಟ ಡೆವಿಲ್

ಒಟ್ಟಾರೆ, ಡೆವಿಲ್ ಟೀಸರ್ ದರ್ಶನ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದೆ. ದರ್ಶನ್ ಜೊತೆಗೆ ಈ ಹಿಂದೆ ತಾರಕ್ ಚಿತ್ರವನ್ನ ಮಾಡಿದ್ದ ನಿರ್ದೇಶಕ ಪ್ರಕಾಶ್ ವೀರ್, ಡೆವಿಲ್​ನ ಸಾರಥಿ. ತಾರಕ್​ನಲ್ಲೂ ದರ್ಶನ್​ರನ್ನ ಸಖತ್ ಸ್ಟೈಲಿಶ್ ಆಗಿ ತೋರಿಸಿದ್ದ ಪ್ರಕಾಶ್ ಈ ಬಾರಿ ನೆಗೆಟಿವ್ ಶೇಡ್ ಪಾತ್ರದಲ್ಲಿ ಮತ್ತಷ್ಟು ವಿಭಿನ್ನವಾಗಿ ತೋರಿಸೋದಕ್ಕೆ ಸಜ್ಜಾಗಿದ್ದಾರೆ.

ವರ್ಷಾಂತ್ಯಕ್ಕೆ ಡೆವಿಲ್ ಸಿನಿಮಾ ರಿಲೀಸ್

ಇನ್ನೂ ಕಾಟೇರ ಡಿಓಪಿ ಸುಧಾಕರ್ ರಾಜ್ ಅವರೇ ಡೆವಿಲ್ಗೆ ಕ್ಯಾಮರಾ ಕಣ್ಣಾಗಿ ಕೆಲಸ ಮಾಡ್ತಿದ್ದಾರೆ. ಅಜನೀಶ್ ಲೋಕನಾಥ್ ಫಸ್ಟ್ ಟೈಮ್ ದರ್ಶನ್ ಸಿನಿಮಾಗೆ ಮ್ಯೂಸಿಕ್ ಮಾಡ್ತಾ ಇರೋದು ಮತ್ತೊಂದು ವಿಶೇಷ. ಸದ್ಯ ಟೀಸರ್ ಮೂಲಕ ಕಿಚ್ಚು ಹಚ್ಚಿರೋ ಡೆವಿಲ್ ಈ ವರ್ಷದಲ್ಲೇ ಪ್ರೇಕ್ಷಕರೆದ್ರು ಬರಲಿದೆ.

RELATED ARTICLES

Related Articles

TRENDING ARTICLES