Friday, December 27, 2024

ವಿಜಯೇಂದ್ರ ತರ ಸಿಎಂ-ಡಿಕೆಶಿ ಜೊತೆ ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆಸಿಕೊಳ್ಳಲ್ಲ : ಶಾಸಕ ಯತ್ನಾಳ್

ಬೆಂಗಳೂರು : ನಾನು ಬೇರೆಯವರ ರೀತಿ ಯಾವುದೇ ಅರ್ಜೆಸ್ಟ್ ಮೆಂಟ್ ರಾಜಕಾರಣಿಯಲ್ಲ ಎಂದು ಸ್ವಪಕ್ಷದವರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದರು.

ಬೆಂಗಳೂರಿನಲ್ಲಿ ಪವರ್​ ಟಿವಿಯೊಂದಿಗೆ ಮಾತನಾಡಿದ ಅವರು, ಆರ್. ಅಶೋಕ್ ಮತ್ತು ಬಿ.ವೈ. ವಿಜಯೇಂದ್ರ ತರಹ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಬಳಿ ಹೋಗಿ, ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆಸಿಕೊಳ್ಳಲ್ಲ ಎಂದು ಕುಟುಕಿದರು.

ಇನ್ನು ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಅವರ ಬಳಿ ನಾನು ಮಾತನಾಡಿರುವೆ. ಅವರನ್ನು ಮನವೊಲಿಸಿರುವೆ. ನೀವು ಮತ್ತೆ ಮಂತ್ರಿಯಾಗ್ತಿರಿ ಅಂತ ಹೇಳಿರುವೆ. ಅವರು ಬಿಜೆಪಿ ಪಕ್ಷದಲ್ಲೇ ಉಳಿಯುವ ಭರವಸೆ ಇದೆ ಎಂದು ಯತ್ನಾಳ್ ಹೇಳಿದರು.

ಇದು ಸಿದ್ದರಾಮಯ್ಯ ಕೊನೆಯ ಬಜೆಟ್

ರಾಜ್ಯ ಬಜೆಟ್ ಬಗ್ಗೆ ಮಾತನಾಡಿದ ಅವರು, ಇದೊಂದು ನಿರಾಸೆಯಿಂದ, ಸಪ್ಪೆಯಿಂದ ಕೂಡಿರುವ ಬಜೆಟ್. ಇದರಲ್ಲಿ ಏನು ಇಲ್ಲ.‌ಉಚಿತ ಗ್ಯಾರಂಟಿಗಲ್ಲಿಯೇ ಸಂಪೂರ್ಣ ವಿಫಲರಾಗಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಒಳ್ಳೆಯದಲ್ಲ. ಇನ್ನು ಇದು ಈ ಸರ್ಕಾರ ಮತ್ತು‌ ಸಿದ್ದರಾಮಯ್ಯ ಕೊನೆಯ ಬಜೆಟ್. ಈ ಸರ್ಕಾರ ಲೋಕಸಭಾ ಚುನಾವಣೆ ಆದಮೇಲೆ ಉಳಿಯಲ್ಲ ಎಂದು ಶಾಸಕ ಯತ್ನಾಳ್ ಭವಿಷ್ಯ ನುಡಿದರು.

RELATED ARTICLES

Related Articles

TRENDING ARTICLES