Wednesday, January 22, 2025

ಕುಂಬ್ಳೆ ದಾಖಲೆ ಉಡೀಸ್.. ಟೆಸ್ಟ್ ಕ್ರಿಕೆಟ್​ನಲ್ಲಿ 500 ವಿಕೆಟ್ ಕಬಳಿಸಿದ ಅಶ್ವಿನ್

ಬೆಂಗಳೂರು : ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಒಂದು ವಿಕೆಟ್ ಪಡೆಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು. ಅಲ್ಲದೆ, ಅತಿ ಕಡಿಮೆ ಟೆಸ್ಟ್​ ಪಂದ್ಯಗಳಲ್ಲಿ (98) 500 ವಿಕೆಟ್ ಪಡೆಯುವ ಮೂಲಕ ಅನಿಲ್ ಕುಂಬ್ಳೆ ದಾಖಲೆ ಮುರಿದರು.

ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಝಾಕ್ ಕ್ರಾಲಿ ವಿಕೆಟ್ ಪಡೆಯುವ ಮೂಲಕ ರವಿಚಂದ್ರನ್ ಅಶ್ವಿನ್​ ಹೊಸ ದಾಖಲೆ ಬರೆದರು. ಅಲ್ಲದೆ, ಈ ಸಾಧನೆ ಮಾಡಿದ ವಿಶ್ವದ 10ನೇ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಟೆಸ್ಟ್ ಕ್ರಿಕೆಟ್​ನಲ್ಲಿ 500 ವಿಕೆಟ್​ಗಳನ್ನು ಕಬಳಿಸಿದ ಏಕೈಕ ಭಾರತೀಯ ಬೌಲರ್ ಎಂಬ ದಾಖಲೆ ಅನಿಲ್ ಕುಂಬ್ಳೆ ಅವರ ಹೆಸರಿನಲ್ಲಿದೆ. ಕುಂಬ್ಳೆ 132 ಟೆಸ್ಟ್ ಪಂದ್ಯಗಳಿಂದ ಒಟ್ಟು 619 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಅಶ್ವಿನ್ ಅವರು 98 ಟೆಸ್ಟ್​ ಪಂದ್ಯಗಳಲ್ಲಿ 500 ವಿಕೆಟ್​ಗಳನ್ನು ಪಡೆದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್ ಪಡೆದ 2ನೇ ಭಾರತೀಯ ಎಂಬ ಶ್ರೇಯಕ್ಕೆ ಪಾತ್ರರಾದರು.

ಇನ್ನು ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವಿಶ್ವ ದಾಖಲೆ ಇರುವುದು ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. 133 ಟೆಸ್ಟ್ ಪಂದ್ಯಗಳಿಂದ 800 ವಿಕೆಟ್ ಕಬಳಿಸಿ ಮುರಳೀದರನ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಅತಿ ಕಡಿಮೆ ಟೆಸ್ಟ್‌ ಪಂದ್ಯದಲ್ಲಿ 500 ವಿಕೆಟ್‌ ಪಡೆದವರು

ಮುತ್ತಯ್ಯ ಮುರಳೀಧರನ್ : 87 ಟೆಸ್ಟ್ ಪಂದ್ಯ

ಆರ್. ಅಶ್ವಿನ್ : 98 ಟೆಸ್ಟ್​ ಪಂದ್ಯ

ಅನಿಲ್ ಕುಂಬ್ಳೆ : 105 ಟೆಸ್ಟ್​ ಪಂದ್ಯ

ಶೇನ್​ ವಾರ್ನ್ : 108 ಟೆಸ್ಟ್​ ಪಂದ್ಯ

ಜಿ ಮೆಕ್‌ಗ್ರಾತ್ : 110 ಟೆಸ್ಟ್​ ಪಂದ್ಯ

RELATED ARTICLES

Related Articles

TRENDING ARTICLES