Saturday, November 2, 2024

ರೋಹಿತ್ ಶರ್ಮಾ ಭರ್ಜರಿ ಶತಕ, ಜಡ್ಡು ಬೊಂಬಾಟ್ ಬ್ಯಾಟಿಂಗ್

ಬೆಂಗಳೂರು : ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದರು.

ರಾಜ್​ಕೋಟ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಆಂಗ್ಲರು ಭಾರತಕ್ಕೆ ಆರಂಭದಲ್ಲೇ ಶಾಕ್ ನೀಡಿದರು.

ಕೇವಲ 33 ರನ್​ ಕಲೆ ಹಾಕುವಷ್ಟರಲ್ಲೇ ಭಾರತ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆರಂಭಿಕ ಬ್ಯಾಟರ್ ಜೈಸ್ವಾಲ್ 10, ಶುಭ್​ಮನ್ ಗಿಲ್ ಶೂನ್ಯ (0) ಹಾಗೂ ರಜತ್ ಪಟೀದಾರ್ 5 ರನ್​ ಗಳಿಸಿ ವಿಕೆಟ್ ಒಪ್ಪಿಸಿದರು.

ಸಂಕಷ್ಟದಲ್ಲಿದ್ದ ಭಾರತಕ್ಕೆ ಹಿಟ್​ ಮ್ಯಾನ್ ರೋಹಿತ್​ ಶರ್ಮಾ ಆಸರೆಯಾದರು. ರವೀಂದ್ರ ಜಡೇಜಾ ಜೊತೆ ಸೇರಿಕೊಂಡು ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದರು. 174 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ನೆರವಿನೊಂದಿಗೆ ಶತಕ (111*) ಪೂರೈಸಿದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 11ನೇ ಶತಕ ದಾಖಲಿಸಿದರು.

ಜಡ್ಡು ಬೊಂಬಾಟ್ ಅರ್ಧಶತಕ

ಎರಡನೇ ಟೆಸ್ಟ್​ ಪಂದ್ಯದಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಮೂರನೇ ಪಂದ್ಯದಲ್ಲಿ ಬೊಂಬಾಟ್ ಕಂಬ್ಯಾಕ್ ಮಾಡಿದರು. ಹಿಟ್​ ಮ್ಯಾನ್​ ಜೊತೆಗೂಡಿ ಆಂಗ್ಲರನ್ನು ಬಿಟ್ಟು ಬಿಡದೇ ಕಾಡಿದರು. 138 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್​ನೊಂದಿಗೆ ಅರ್ಧಶತಕ (70*) ಸಿಡಿಸಿದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 21ನೇ ಅರ್ಧಶತಕ ದಾಖಲಿಸಿದರು.

RELATED ARTICLES

Related Articles

TRENDING ARTICLES