ರಾಯಚೂರು: ಧರ್ಮ ಪ್ರಚಾರದ ವಿಚಾರದಲ್ಲಿ ಇಸ್ಲಾಮಿಸ್ಟ್‌ಗಳ ಮಧ್ಯೆಯೇ ಕಿತ್ತಾಟ ನಡೆದಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ದೇವತಗಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮುಸ್ಲಿಂ ಧರ್ಮದ ಎರಡೂ ಒಳ ಪಂಗಡಗಳ ನಡುವೆ ಗಲಾಟೆ ನಡೆದಿದೆ.
ಧರ್ಮ ಪ್ರಚಾರಕ್ಕೆ ಆಗಮಿಸಿದ್ದ ಮೌಲ್ವಿ ಮೇಲೆ ಕೆಲ ಯುವಕರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮೌಲ್ವಿಯೊಬ್ಬರು ಅಹಮದೀಯ ಪಂಗಡ ಪರ ಪ್ರಚಾರ ನಡೆಸಲು ಬಂದಿದ್ದರು. ಹೊಸಪೇಟೆಯಿಂದ ಆಗಮಿಸಿ ದೇವತಗಲ್ ಗ್ರಾಮದಲ್ಲಿ ಹಿಂದೂ- ಮುಸ್ಲಿಂ ಭಾವೈಕ್ಯತೆ ಸಂದೇಶ ಸಾರುತ್ತಿದ್ದ ಅಹಮದೀಯ ಮೌಲ್ವಿ ಖಾಜಿ ಮೊಹಮ್ಮದ್ ರಫಿ ಎಂಬುವವರು ಪ್ರಚಾರ ಮಾಡುತ್ತಿದ್ದರು.
ಇದರಿಂದ ಸಿಟ್ಟಿಗೆದ್ದ ಇತರೆ ಮುಸ್ಲಿಂ ಸಮುದಾಯದ ಯುವಕರು ಮೊಹಮ್ಮದ್ ರಫಿ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ. ಅಹಮದೀಯ ತತ್ವ ಪ್ರಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಮುಸ್ಲಿಂ ಮುಖಂಡರು ಯುವಕರ ಬೈಟೆಕ್ ನಡೆಸಿ ಹಲ್ಲೆ ಹಾಗೂ ಹಿಂಸಾಚಾರ ಮಾಡದಂತೆ ಯುವಕರಿಗೆ ಸಲಹೆ ನೀಡಿದ್ದಾರೆ. ನಂತರ ಪ್ರಚಾರಕ್ಕೆ ಬಂದಿದ್ದ ಅಹಮದೀಯರನ್ನು ಬಿಟ್ಟು ಕಳಿಸಲಾಗಿದೆ. ಆದರೆ ಮಸೀದಿಗಳಲ್ಲಿ ಮತ್ತು ಮುಸ್ಲಿಂ ಬಡಾವಣೆಯಲ್ಲಿ ಅಹಮದೀಯರು ಕಂಡರೇ ಮಾಹಿತಿ ನೀಡುವಂತೆ ಕರೆ ನೀಡಲಾಗಿದೆ ಎನ್ನಲಾಗಿದೆ.