Wednesday, May 1, 2024

ಮಾಧುಸ್ವಾಮಿ ಬಿಜೆಪಿ ಬಾವುಟವೇ ಕಟ್ಟಿಲ್ಲ : ಶಾಸಕ ಸುರೇಶ್ ಗೌಡ

ತುಮಕೂರು : ತುಮಕೂರು ಬಿಜೆಪಿಯಲ್ಲಿ ಲೋಕಸಭಾ ಟಿಕೆಟ್ ಗುದ್ದಾಟ ಮುಂದುವರಿದಿದೆ. ಒಂದೆಡೆ ವಿ. ಸೋಮಣ್ಣಗೆ ಟಿಕೆಟ್ ಕೊಡಿಸಲು ಸಂಸದ ಜಿ.ಎಸ್ ಬಸವರಾಜ್ ಹರಸಾಹಸ ಪಡುತ್ತಿದ್ದಾರೆ. ಮತ್ತೊಂದೆಡೆ, ಮುದ್ದಹನುಮೇಗೌಡ ಪರ ಬ್ಯಾಟಿಂಗ್ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಬ್ಯಾಟ್ ಬೀಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಜಿ.ಎಸ್. ಬಸವರಾಜ್ ಹಾಗೂ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧವೂ ಕಿಡಿಕಾರಿದ್ದಾರೆ. ಬಸವರಾಜ್ ಯಾರೋ ಒಬ್ಬರನ್ನ‌ ಹಿಡ್ಕೊಂಡು ಓಡಾಡಬಾರದು. ಮಾಧುಸ್ವಾಮಿ ಬಿಜೆಪಿ ಬಾವುಟವೇ ಕಟ್ಟಿಲ್ಲ ಎಂದು ಹೇಳಿದ್ದಾರೆ.

ಸೋಮಣ್ಣ ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಉಸ್ತುವಾರಿಯಿದ್ದರು. ಹೀಗಾಗಿ, ಅವರಿಗೆ ಸಂಪರ್ಕವಿದೆ, ಇಲ್ಲಿ ಓಡಾಡುತ್ತಿದ್ದಾರೆ ಅಷ್ಟೇ. ಸೋಮಣ್ಣ ಹೇಳಿದ್ದಾರೆ ನನಗೆ ಪಾರ್ಲಿಮೆಂಟ್ ಟಿಕೆಟ್ ಬೇಡ ಅಂತ. ಮೂರು ಪಾರ್ಲಿಮೆಂಟ್ ಕ್ಷೇತ್ರ ಕೊಡಿ ಗೆಲ್ಲಿಸಿಕೊಂಡು ಬರ್ತೀನಿ ಅಂತ ಹೇಳಿದ್ದಾರೆ. ಹೀಗಾಗಿ ಓಡಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮುದ್ದಹನುಮೇಗೌಡರಿಗೆ ನ್ಯಾಯ ಸಿಗುತ್ತೆ

ಪಕ್ಷ ಯಾರಿಗೂ ಟಿಕೆಟ್ ನೀಡಿದ್ರು ಗೆಲ್ಲಿಸಿಕೊಂಡು ಬರುತ್ತೇವೆ.‌ ಎಸ್.ಪಿ. ಮುದ್ದಹನುಮೇಗೌಡರು ಇನ್ನು ಬಿಜೆಪಿಯಲ್ಲೇ ಇದ್ದಾರೆ. ಲೋಕಸಭೆ ಟಿಕೆಟ್ ರಾಜ್ಯದಲ್ಲಿ ನಿರ್ಧಾರವಾಗಲ್ಲ. ಜೆ.ಪಿ. ನಡ್ಡಾ, ಅಮಿತ್ ಶಾ, ಪ್ರಧಾನಿ ಮೋದಿಯವರು ನಿರ್ಧಾರ ಮಾಡ್ತಾರೆ. ಮುದ್ದಹನುಮೇಗೌಡರಿಗೆ ಹೋಗಬೇಡಿ, ನ್ಯಾಯ ಸಿಗುತ್ತೆ ಅಂತ ವಿನಂತಿ ಮಾಡಿದ್ದೆ. ಆದರೂ ಹೋದ್ರು, ಕಾದು ನೋಡೋಣ‌ ಏನಾಗುತ್ತೆ ಅಂತ ಎಂದು ಹೇಳಿದ್ದಾರೆ.

ಮುದ್ದಹನುಮೇಗೌಡ ಕಾಂಗ್ರೆಸ್ ಸೇರ್ಪಡೆಯಾಗಿಲ್ಲ

ಅವರಿನ್ನು ಹೋಗಿ ಕಾಂಗ್ರೆಸ್ ಸೇರ್ಪಡೆಯಾಗಿಲ್ಲ. ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ ಎಂದು ಮುದ್ದಹನುಮೇಗೌಡ್ರು ಕೂಡ ಅಧಿಕೃತವಾಗಿ ಹೇಳಿಲ್ಲ. ಮುದ್ದಹನುಮೇಗೌಡರನ್ನ ಸೇರಿಸಿಕೊಳ್ಳಬೇಕು ಅನ್ನೋದು ಸಚಿವ ಕೆ.ಎನ್ ರಾಜಣ್ಣನವರ ಅಭಿಪ್ರಾಯ. ಅವರೇ ಹೈಕಮಾಂಡ್​ ಕೇರ್ ಮಾಡಲ್ಲ ಅಂತಿದ್ದಾರೆ.‌ ಮತ್ತೆ ಟಿಕೆಟ್ ಕೊಡೊರು ಯಾರು? ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ಕೂಡ ಟಿಕೆಟ್ ಕೊಡ್ತೀವಿ ಅಂತ ಹೇಳಿಲ್ಲ ಎಂದು ಶಾಸಕ ಬಿ. ಸುರೇಶ್ ಗೌಡ ತಿಳಿಸಿದರು.

RELATED ARTICLES

Related Articles

TRENDING ARTICLES