Thursday, May 16, 2024

ಪ್ರಜ್ವಲ್ ರೇವಣ್ಣ​ ಸದ್ಯ ಕಾಂಗ್ರೆಸ್​-ಜೆಡಿಎಸ್​ ಅಭ್ಯರ್ಥಿ, ಫಲಿತಾಂಶದ ಬಳಿಕ ಎನ್​ಡಿಎ ಅಭ್ಯರ್ಥಿ: ಮಾಳವಿಕ ಅವಿನಾಶ್​

ಬೆಳಗಾವಿ: ಹಾಸನದ ಹಾಲಿ ಎಂಪಿ ಪ್ರಜ್ವಲ್ ರೇವಣ್ಣ ಜೂನ್​ 4. 2024ರ ವರೆಗೆ ಕಾಂಗ್ರೆಸ್​ – ಜೆಡಿಎಸ್​ ಒಕ್ಕೂಟದ ಸಂಸದರಾಗಿರುತ್ತಾರೆ. ಈ ಬಾರಿಯ ಚುನಾವಣೆಯ ಫಲಿತಾಂಶ ಬಂದು ಅದರಲ್ಲೂ ಗೆದ್ದರೇ ಆ ಬಳಿಕ ಎನ್​ಡಿಎ ಸಂಸದರಾಗುತ್ತಾರೆ ಎಂದು ಬಿಜೆಪಿ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್​ ತಿಳಿಸಿದರು.

ಬೆಳಗಾವಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರ ಮಾನಹಾನಿ ಕೃತ್ಯ ಯಾರೇ ಮಾಡಿದ್ದರೂ ಅದು ಘೋರ ಅಪರಾಧ, ಅಂತವರು ಯಾರೇ ಆದರೂ ಅವರಿಗೆ ಶಿಕ್ಷೆಯಾಗಲೇ ಬೇಕು, ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪ್ರಜ್ವಲ್​ ನನ್ನು ಜೆಡಿಎಸ್​ ಪಕ್ಷದಿಂದ ಅಮಾನತು ಮಾಡಿದೆ. ಇನ್ನು ಈ ಪೆನ್​ಡ್ರೈವ್​ ಪ್ರಕರಣದ ತನಿಖೆಯನ್ನು ಈಗಾಗಲೇ ಎಸ್​ಐಟಿ ತಂಡ ಕೈಗೊಂಡಿದ್ದು ಸದ್ಯ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಸತ್ಯಾಸತ್ಯತೆ ಎಷ್ಟಿದೆ ಎನ್ನುವುದು ಬಹಿರಂಗವಾಗಬೇಕಾಗಿದೆ. ಕಾನೂನು ಎಲ್ಲರಿಗೂ ಒಂದೇ ಇದೆ, ಅವರು ತಪ್ಪು ಮಾಡಿದ್ರೆ ಶಿಕ್ಷೆ ಅನಿಭವಿಸುತ್ತಾರೆ ಎಂದರು.

ಇದನ್ನೂ ಓದಿ: ರೇವಣ್ಣ, ಪ್ರಜ್ವಲ್​ಗೆ SIT ನೋಟೀಸ್​: ಪ್ರಕರಣಕ್ಕೆ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಎಂಟ್ರಿ

ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋಗಳಿಗೆ ಸಂಬಂಧಿಸಿದ ಪೆನ್​ಡ್ರೈವ್​ ಯಾರು ರಿಲೀಸ್​ ಮಾಡಿದ್ದಾರೋ ಅದು ಘೋರ ಅಪರಾಧ, ಮಹಿಳೆಯರ ಖಾಸಗಿತನವನ್ನು ಯಾರೇ ಬಹಿರಂಗ ಪಡಿಸಿದರು ಅದು ತಪ್ಪು, ಕೊನೆಯ ಪಕ್ಷ ಮಹಿಳೆಯರ ಮುಖವನ್ನು ಬ್ಲರ್​ ಮಾಡಬೇಕಿತ್ತು ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES