Monday, December 23, 2024

ಆರ್. ಅಶೋಕ್​ಗೆ 2010ರಲ್ಲಿ ನಾನು 1 ಕೋಟಿ ನೀಡಿದ್ದೆ : ಪದ್ಮರಾಜ್ ಹೊಸ ಬಾಂಬ್

ಬೆಂಗಳೂರು : ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ 2010ರಲ್ಲಿ ನಾನು 1 ಕೋಟಿ ರೂಪಾಯಿ ಕೊಟ್ಟಿದ್ದೆ ಎಂದು ಮಾಜಿ ಕಾರ್ಪೊರೇಟರ್ ಪದ್ಮರಾಜ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಶಾಸಕ ಕೆ. ಗೋಪಾಲಯ್ಯ ಕೊಲೆ ಬೆದರಿಕೆ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ಮಾತನಾಡಿದ ಅವರು, ನನಗೆ ಕಾಂಟ್ಯಾಕ್ಟ್ ಕೊಡಿಸಲು ನಾನು ಹಣ ನೀಡಿದ್ದೆ. ಇದೇ ರೀತಿ ಈಗಿನ ವಿರೋಧ ಪಕ್ಷ ನಾಯಕ ಆಶೋಕ್ ಅವರಿಗೂ ಹಣ ನೀಡಿದ್ದೆ ಎಂದು ಹೇಳಿದ್ದಾರೆ.

2010ರಲ್ಲಿ ನನ್ನನ್ನು ಮೇಯರ್ ಮಾಡುತ್ತೇನೆ ಎಂದು ಆರ್. ಅಶೋಕ್​ ಅವರು ಹಣ ಪಡೆದಿದ್ದರು. 2010ರಲ್ಲಿ ನಾನು ಅಶೋಕ್​ ಅವರಿಗೆ 1 ಕೋಟಿ ರೂಪಾಯಿ ಹಣ ನೀಡಿದ್ದೆ. ಮೈಸೂರಿನ ನಾಗೇಂದ್ರ ಅವರು ಇದಕ್ಕೆಲ್ಲಾ ಮಧ್ಯಸ್ಥಿಕೆ ವಹಿಸಿದ್ದರು. ನಾನು ಕಾಂಗ್ರೆಸ್ ಸೇರ್ಪಡೆಯಾದ ನಂತರ ಆ ಹಣಕ್ಕಾಗಿ ಬಡ್ಡಿ ಕಟ್ಟಿದ ಎಲ್ಲಾ ಮಾಹಿತಿ ಕಳುಹಿಸಿದ್ದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್​ಗೆ ಬಂದ್ಮೇಲೆ ಹಣ ವಾಪಸ್ ಪಡೆದೆ

ನಾನು ಬಿಜೆಪಿಯಲ್ಲಿ ಇದ್ದಾಗ 2010 ರಲ್ಲಿ ಬಿಜೆಪಿ ನಾಯಕ ಅಶೋಕ್ ಅವರು, ನನ್ನ ಮೇಯರ್ ಮಾಡ್ತಿನಿ ಅಂತ ಹೇಳಿದ್ದರು. ಇದಕ್ಕಾಗಿಯೇ ಒಂದು ಕೋಟಿ ಹಣ ತೆಗೆದುಕೊಂಡರು. ಇವತ್ತಿಗೂ ಮೇಯರ್ ಮಾಡಲಿಲ್ಲ. ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರ್ಪಡೆಯಾದ ನಂತರ ಆ ಹಣವನ್ನು ವಾಪಸ್ ತೆಗೆದುಕೊಂಡಿದ್ದೇನೆ ಎಂದು ಮಾಜಿ ಕಾರ್ಪೊರೇಟರ್ ಪದ್ಮರಾಜ್ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES