Monday, December 23, 2024

ಎರಡು ಸಾಕಾಗಲ್ಲ, ನಾಲ್ಕೈದು ನಿಂಬೆ ಹಣ್ಣು ಮಂತ್ರ ಮಾಡು, ಸರ್ಕಾರ ಬೀಳಿಸೋಣ : ರೇವಣ್ಣ ಕಾಲೆಳೆದ ಅಶೋಕ್

ಬೆಂಗಳೂರು : ಎರಡು ನಿಂಬೆ ಹಣ್ಣು ಸಾಕಾಗಲ್ಲ,‌ ನಾಲ್ಕೈದು‌ ನಿಂಬೆ ಹಣ್ಣು ಮಂತ್ರ ಮಾಡು. ಕಾಂಗ್ರೆಸ್​ ಸರ್ಕಾರ‌ ಬೀಳಿಸೋಣ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣರನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಾಲೆಳೆದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಎರಡು ನಿಂಬೆ ಹಣ್ಣಿನಿಂದ ಕಾಂಗ್ರೆಸ್​ ಸರ್ಕಾರ ಪತನ ಮಾಡಲು ಆಗಲ್ಲ. ನಾಲ್ಕೈದು‌ ನಿಂಬೆ ಹಣ್ಣು ಮಂತ್ರ ಮಾಡಿ, ಸರ್ಕಾರ‌ ಬೀಳಿಸೋಣ. ಸರ್ಕಾರ ಪತನವಾದರೆ ನಿಮಗೆ ಲೋಕೋಪಯೋಗಿ ಖಾತೆ ಫಿಕ್ಸ್ ಎಂದು ವ್ಯಂಗ್ಯವಾಗಿ ರೇವಣ್ಣಗೆ ಆಫರ್ ನೀಡಿದರು.

ಇದಕ್ಕೆ ತಿರುಗೇಟು ನೀಡಿದ ಹೆಚ್.ಡಿ. ರೇವಣ್ಣ ಅವರು, ಅದರ ಅವಶ್ಯಕತೆ ನಮಗಿಲ್ಲ. ಜನರಿಂದ ಬಂದ ಸರ್ಕಾರ ಗಟ್ಟಿಯಾಗಿದೆ ಎಂದು ತಿರುಗೇಟು ನೀಡಿದರು.

ನನ್ನ ಮೇಲೆ ಯಾಕೆ ಕಾಳಜಿ ಇರಲಿಲ್ಲ

ಇನ್ನೂ ಪರಿಷತ್​ನಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಇವತ್ತು ಇಡೀ ಸದನ ಶಾಸಕ ಕೆ. ಗೋಪಾಲಯ್ಯನವರ ಪರ ಇದೆ. ಆಗ ನನ್ನ ಮೇಲೆ ಯಾಕೆ ಈ ಕಾಳಜಿ ಇರಲಿಲ್ಲ. ನನಗೆ ಕೊಟ್ಟ ಪೊಲೀಸ್ ಭದ್ರತೆಯನ್ನೂ ವಾಪಸ್ ಪಡೆಯಿತು ಅಂದಿನ ಬಿಜೆಪಿ ಸರ್ಕಾರ ಎಂದರು.

ನಿಮ್ಮ ಬಣ ಮತ್ತು ಯೋಗ್ಯತೆಯನ್ನ ಬಯಲು

ಪ್ರಿಯಾಕ್ ಖರ್ಗೆ ಮಾತಿಗೆ ಧ್ವನಿಗೂಡಿಸಿದ ಅಲ್ಲೇ ಇದ್ದ ಕಾಂಗ್ರೆಸ್ ಪರಿಷತ್ ಸದಸ್ಯ ರವಿ ಅವರು, ಸಚಿವರು ನಿಮ್ಮ ಬಣ ಮತ್ತು ಯೋಗ್ಯತೆಯನ್ನ ಬಯಲು ಮಾಡಿದ್ದಾರೆ ಎಂದರು. ಈ ವೇಳೆ ಸದನದಲ್ಲಿ ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

RELATED ARTICLES

Related Articles

TRENDING ARTICLES