Wednesday, January 22, 2025

ಸವಳಂಗ ರಸ್ತೆಯಲ್ಲಿ ನಮ್ಮಪ್ಪನ ಆಸ್ತಿ ಯಾವುದು ಇಲ್ಲ : ಸಂಸದ ರಾಘವೇಂದ್ರ ಗರಂ

ಶಿವಮೊಗ್ಗ : ಬಿಜೆಪಿಯವರ ಆಸ್ತಿ ಇರುವ ಕಡೆ ರೈಲ್ವೆ ಮೇಲ್ಸೇತುವೆ ಆಗಿವೆ ಎಂದು ಆರೋಪ ಮಾಡುತ್ತಾರೆ. ಸವಳಂಗ ರಸ್ತೆಯಲ್ಲಿ ನಮ್ಮಪ್ಪನ ಆಸ್ತಿ ಯಾವುದು ಇಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಕಿಡಿಕಾರಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಭಿವೃದ್ಧಿಯ ವಿಚಾರದಲ್ಲಿ ಶಿವಮೊಗ್ಗದಲ್ಲಿ ಏನು ಆಗಿಲ್ಲ ಎಂದು ಹೇಳುವ ಆಯನೂರು ಮಂಜುನಾಥ್ ಒಮ್ಮೆ ಶಿವಮೊಗ್ಗವನ್ನು ನೋಡಲಿ. ಕೈ ಬಲವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಕಡೆ ಬೆರಳು ತೋರಿಸುವುದನ್ನು ಬಿಡಲಿ ಎಂದು ಕುಟುಕಿದರು.

ಆಯನೂರು ಒಂದು ತಲೆಮಾರಿನಷ್ಟು ಕಾಲ ಬಿಜೆಪಿಯಲ್ಲಿದ್ದವರು. ಈಗ ಕಾಂಗ್ರೆಸ್‍ನವರು ಕೊಟ್ಟ ಹುದ್ದೆಯನ್ನು ಉಳಿಸಿಕೊಳ್ಳಲು ಬಿಜೆಪಿ ನಾಯಕರ ಬಗ್ಗೆ ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಕೆಸರೆರಚಾಟವನ್ನು ಅವರು ನಿಲ್ಲಿಸಲಿ ಎಂದು ಹೇಳಿದರು.

ಸಿದ್ದರಾಮಯ್ಯ ಬಾಯಿ ತಪ್ಪಿನಿಂದ ಮಾತಾಡಿದ್ರಾ?

ಆಯನೂರು ಮಂಜುನಾಥ್ ಕಾಂಗ್ರೆಸ್‍ನವರು ನೀಡಿದ ಹೇಳಿಕೆಗಳನ್ನೆಲ್ಲ ಬಾಯಿ ತಪ್ಪಿನಿಂದ ಆಗಿದೆ ಎಂದು ಹೇಳುತ್ತಾರೆ. ಹಾಗಾದರೆ, ಸಿಎಂ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳಿಗೆ, ಕೇಂದ್ರ ಹಣಕಾಸು ಸಚಿವರಿಗೆ ಮಾತನಾಡಿದ್ದು ಬಾಯಿ ತಪ್ಪಿನಿಂದಲೇ..? ಡಿ.ಕೆ. ಸುರೇಶ್ ದೇಶವನ್ನೇ ಇಬ್ಭಾಗದ ಬಗ್ಗೆ ಮಾತನಾಡಿದ್ದು ಬಾಯಿ ತಪ್ಪಿನಿಂದಲೇ..? ಇವರೇ ಉತ್ತರ ಹೇಳಬೇಕು ಎಂದು ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES