Sunday, December 22, 2024

ಸಿದ್ದರಾಮಯ್ಯ ಬಜೆಟ್ ಠುಸ್ ಪಟಾಕಿ ಆಗುತ್ತೆ : ಶಾಸಕ ಹರೀಶ್ ಪೂಂಜಾ

ಬೆಂಗಳೂರು : ನನಗೆ ವಿಶ್ವಾಸವಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಠುಸ್ ಪಟಾಕಿ ಆಗುತ್ತದೆ ಎಂದು ಶಾಸಕ ಹರೀಶ್ ಪೂಂಜಾ ಲೇವಡಿ ಮಾಡಿದರು.

ರಾಜ್ಯ ಬಜೆಟ್ ವಿಚಾರ ಕುರಿತು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ತುಂಬಾ ಪರಿಣತರು. ಅವರಿಗೆ ಮೊದಲೇ ಗೊತ್ತಾಗಿದೆ. ಈ ಬಾರಿ ಬಜೆಟ್​ನಲ್ಲಿ ಏನು ಕೊಡಕ್ಕೆ ಆಗಲ್ಲ ಅಂತ. ಅದಕ್ಕೆ ದೆಹಲಿ ನಾಟಕವನ್ನು ತೋರಿಸಿದ್ದಾರೆ ಎಂದು ಕುಟುಕಿದರು.

ನನಗೆ ವಿಶ್ವಾಸವಿದೆ ಸಿದ್ದರಾಮಯ್ಯ ಅವರ ಬಜೆಟ್ ಠುಸ್ ಪಟಾಕಿ ಆಗುತ್ತದೆ. ರಾಜ್ಯದಲ್ಲಿ ಅಭಿವೃದ್ದಿಯೇ ಆಗಿಲ್ಲ. ನಮ್ಮ ಕ್ಷೇತ್ರ ಕರಾವಳಿ ಅಭಿವೃದ್ಧಿ ಬರೀ ಬಂದರು ಮೀನುಗಾರಿಕೆ ಕಾಣುತ್ತದೆ. ಸುಳ್ಯ, ಕಾರ್ಕಾಳ, ಕುಂದಾಪುರ ಇದೆ. ರಸ್ತೆ ಅಭಿವೃದ್ಧಿ ಶಾಲಾ ಕಟ್ಟಡಗಳ ನಿರ್ಮಾಣ ಆಗೋದಿದೆ. ಚಪ್ಪಲಿ ಸವದು ಹೋಗಿದೆ ಸಚಿವರಿಗೆ ಮನವಿ ಮಾಡಿದ್ರು ಪ್ರಯೋಜನವಿಲ್ಲ ಎಂದು ಶಾಸಕ ಹರೀಶ್ ಪೂಂಜಾ ಬೇಸರಿಸಿದರು.

ಜಿಲ್ಲಾಧಿಕಾರಿ, ಎಸ್ಪಿಗೆ ಕೇಸ್ ಹಾಕಿ ಎಂದಿದ್ದೇನೆ

ಕೊಪ್ಪಳದ ಆಲವರ್ತಿಯಲ್ಲಿ ಹೋಟೆಲ್, ಅಂಗಡಿಗಳಿಗೆ ದಲಿತರ ಪ್ರವೇಶ ನಿರಾಕರಣೆ ವಿಚಾರವಾಗಿ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಸಿದ್ದಾರೆ. ಕೊಪ್ಪಳ ಘಟನೆ ಮರುಕಳಿಸಲು ಅವಕಾಶ ಕೊಡಲ್ಲ. ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿ, ಎಸ್ಪಿಗೆ ಕೇಸ್ ಹಾಕಿ ಎಂದಿದ್ದೇನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES