Saturday, May 18, 2024

ಸಿದ್ದರಾಮಯ್ಯ ಕ್ಷೇತ್ರದಲ್ಲೇ ಹೆಚ್ಚು ರೈತರ ಆತ್ಮಹತ್ಯೆ : ರೈತರ ಪರ ವಿಜಯೇಂದ್ರ ಧ್ವನಿ

ಬೆಂಗಳೂರು : ರಾಜ್ಯಪಾಲರು ರೈತರ ಆತ್ಮಹತ್ಯೆ ಕಡಿಮೆ ಅಂತಾರೆ. 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲೇ ಹೆಚ್ಚು ಆತ್ಮಹತ್ಯೆಯಾಗಿವೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಅವರು, ಪರಿಹಾರಕ್ಕಾಗಿ ರೈತರ ಆತ್ಮಹತ್ಯೆ ಎಂದು ಸಚಿವರು ಬೇಜವಾಬ್ದಾರಿ ಹೇಳಿಕೆಗಳನ್ನ ಕೊಡುತ್ತಾರೆ. ಕೃಷಿ ಸಾಲಮನ್ನಾಕ್ಕೆ ರೈತರು ‌ಭಾವಿಸ್ತಾರೆ ಅಂತಾರೆ. ರೈತರಿಗೆ ಅಪಮಾನವನ್ನು ಮಾಡುತ್ತಿದ್ದಾರೆ ಎಂದು ಬೇಸರಿಸಿದರು.

ಲೋಡ್ ಶೆಡ್ಡಿಂಗ್ ನಿಂದ ರೈತರು ಪರದಾಡುತ್ತಿದ್ದಾರೆ. ರೈತರ ಪರ ಸರ್ಕಾರ ಅಂತ ಹೇಳುತ್ತಾರೆ. ಹಾಲಿನ ದರ ಹೆಚ್ಚಳ ಮಾಡುತ್ತಾರೆ. ರೈತರ ಪ್ರೋತ್ಸಾಹ ಧn ಕಡಿತ ಮಾಡುತ್ತಾರೆ. ಗ್ರಾಹಕರಿಗೆ ಬೆಲೆ ಏರಿಕೆ ಶಾಕ್ ಕೊಡುತ್ತಾರೆ. ಕೊಟ್ಟ ಭರವಸೆ ಯಾವುದೂ ಈಡೇರಿಲ್ಲ ಎಂದು ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ವಿಜಯೇಂದ್ರ ಗುಡುಗಿದರು.

ದೆಹಲಿಯಲ್ಲಿ ರೈತರ ಬಗ್ಗೆ ಯಾಕೆ ಮಾತಾಡ್ತಿಲ್ಲ

ಈ ವೇಳೆ ಮಧ್ಯಪ್ರವೇಶಿಸಿದ ಶಾಸಕಿ ನಯನಾ ಮೋಟಮ್ಮ ಅವರು, ಇಲ್ಲಿ ರೈತರ ಬಗ್ಗೆ ಮಾತನಾಡುತ್ತೀರಿ. ದೆಹಲಿಯಲ್ಲಿ ರೈತರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಬಾರ್ಡರ್ ನಲ್ಲಿರುವ ರೈತರ ಸಮಸ್ಯೆ ಯಾಕೆ ಆಲಿಸುತ್ತಿಲ್ಲ. ಅಲ್ಲಿನ ರೈತರ ಬಗ್ಗೆ ನೀವು ‌ಮಾತನಾಡಿ ಎಂದು ವಿಜಯೇಂದ್ರ ಮಾತಿಗೆ ನಯನಾ ಮೋಟಮ್ಮ ಟಾಂಗ್ ಕೊಟ್ಟರು.

ಅವ್ರು ರೈತರಲ್ಲ I.N.D.I.A ಒಕ್ಕೂಟದವರು

ಅಲ್ಲಿರುವುದು ರೈತರಲ್ಲ ಇಂಡಿಯಾ ಒಕ್ಕೂಟದವರು ಎಂದು ಸಿದ್ದು ಸವದಿ ಹೇಳಿದರು. ಈ ವೇಳೆ ಕಾಂಗ್ರೆಸ್ ಶಾಸಕರಿಂದ ತೀರ್ವ ಆಕ್ರೋಶ ವ್ಯಕ್ತವಾಯಿತು. ರೈತರ ಬಗ್ಗೆ ಅಪಮಾನ ಮಾಡುತ್ತಿದ್ದೀರಿ ಎಂದು ಅಸಮಾಧಾನ ಹೊರಹಾಕಿದರು.

RELATED ARTICLES

Related Articles

TRENDING ARTICLES