Thursday, January 23, 2025

ಚನ್ನೈ ಸೂಪರ್​ ಕಿಂಗ್​ಗೆ ಬ್ರಾಂಡ್​ ಅಂಬಾಸಿಡರ್​ ಆಗಿ ಕತ್ರಿನಾ ಕೈಫ್​ ಎಂಟ್ರಿ!

ಬೆಂಗಳೂರು : 2024ರ ಐಪಿಎಲ್ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ಫ್ರಾಂಚೈಸಿ ಮಾಲೀಕರು ಈಗಾಗಲೇ ಮುಂಬರುವ ಬ್ಲಾಕ್ಬಸ್ಟರ್ ಟೂರ್ನಿಗಾಗಿ ತಮ್ಮ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ. ಈ ನಡುವೆ 5 ಬಾರಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಬ್ರಾಂಡ್ ಅಂಬಾಸಿಡರ್ ಆಗಿ ಜನಪ್ರಿಯ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್ ನಟಿ ಕತ್ರಿನಾ ಕೈಫ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ IPL 2024 ರ ಸೀಸನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಬ್ರಾಂಡ್ ಅಂಬಾಸಿಡರ್ ಆಗಿ ಫ್ರಾಂಚೈಸಿಗೆ ಸೇರಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಮಾದಾರ ಚನ್ನಯ್ಯ ಸ್ವಾಮೀಜಿ ಕಣಕ್ಕೆ!?

ಚನ್ನೈ ಸೂಪರ್​ ಕಿಂಗ್ಸ್​ ಬ್ರಾಂಡ್ಗೆ ಗ್ಲಾಮರ್ ಮತ್ತು ಸ್ಟಾರ್ ಶಕ್ತಿಯನ್ನು ಹೆಚ್ಚಿಸುವುದಾಗಿದೆ. ಅದರ ಮಾರ್ಕೆಟಿಂಗ್ ಮತ್ತು ಪ್ರಚಾರ ಹೆಚ್ಚಿಸುವ ಜತೆಗೆ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. ಬಹುಮುಖ ಪ್ರತಿಭೆ ಮತ್ತು ಮೋಡಿಗೆ ಹೆಸರುವಾಸಿಯಾದ ಪ್ರಸಿದ್ಧ ಬಾಲಿವುಡ್ ನಟಿ ಕತ್ರಿನಾ ಕೈಫ್ ಸಿಎಸ್​ಕೆ ತಂಡಕ್ಕೆ ಅಪಾರ ಜನಪ್ರಿಯತೆ ಮತ್ತು ಅಭಿಮಾನಿಗಳನ್ನು ತರಲಿದ್ದಾರೆ.

ಒಟ್ಟಾರೆಯಾಗಿ ಐಪಿಎಲ್ 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​​ನ ಬ್ರಾಂಡ್ ಅಂಬಾಸಿಡರ್ ಆಗಿ ಕತ್ರಿನಾ ಕೈಫ್ ಅವರ ನೇಮಕವು ಫ್ರಾಂಚೈಸಿಯ ಬ್ರಾಂಡ್ ಗುರುತನ್ನು ವೃದ್ಧಿಸಲಿದೆ. ಸ್ಪರ್ಧಾತ್ಮಕ ಕ್ರಿಕೆಟ್ ಕ್ಷೇತ್ರದಲ್ಲಿ ಫ್ರಾಂಚೈಸಿಯ ವ್ಯಾಪ್ತಿಯನ್ನು ಗುರಿಯನ್ನು ಹೊಂದಲಾಗಿದೆ.

 

RELATED ARTICLES

Related Articles

TRENDING ARTICLES