Monday, December 23, 2024

ರಾಜ್ಯಸಭೆ ಚುನಾವಣೆ: ಕರ್ನಾಟಕದಿಂದ ಚಂದ್ರಶೇಖರ್, ನಾಸೀರ್,​​ ಮಾಕೇನ್‌​ಗೆ ಕಾಂಗ್ರೆಸ್​ ಟಿಕೆಟ್

ನವದೆಹಲಿ: ನವದೆಹಲಿ: ರಾಜ್ಯಸಭೆ ಚುನಾವಣೆಗೆ ಕರ್ನಾಟಕದಿಂದ ಕಾಂಗ್ರೆಸ್ ಪಕ್ಷ​ ಮೂವರು ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಹಾಲಿ ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್​ ಮತ್ತು ಡಾ.ಸೈಯದ್ ನಾಸೀರ್​ ಹುಸೇನ್​ ಅವರಿಗೆ ಮತ್ತೆ ಟಿಕೆಟ್​ ನೀಡಲಾಗಿದೆ. ಮೂರನೇ ಅಭ್ಯರ್ಥಿಯಾಗಿ ಅಜಯ್​ ಮಾಕೇನ್​ ಅವರಿಗೆ ಟಿಕೆಟ್​ ಘೋಷಿಸಲಾಗಿದೆ.

ಇದೇ ವೇಳೆ, ಮಧ್ಯಪ್ರದೇಶದಿಂದ ಅಶೋಕ್ ಸಿಂಗ್ ಸ್ಪರ್ಧಿಸಿದರೆ, ತೆಲಂಗಾಣದಿಂದ ರೇಣುಕಾ ಚೌಧರಿ, ಎಂ.ಅನಿಲ್ ಕುಮಾರ್ ಯಾದವ್ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ಟೈಂ ಪಾಸ್ ಗಿರಾಕಿ: ಯತ್ನಾಳ್​ ವ್ಯಂಗ್ಯ

ಒಟ್ಟು 15 ರಾಜ್ಯಗಳ 56 ಸ್ಥಾನಗಳಿಗೆ ಫೆ.27ರಂದು ದೈವಾರ್ಷಿಕ ಚುನಾವಣೆ ನಡೆಯಲಿದೆ. ರಾಜಸ್ಥಾನದಿಂದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಬಿಹಾರದಿಂದ ಡಾ. ಅಖಿಲೇಶ್ ಪ್ರಸಾದ್ ಸಿಂಗ್, ಹಿಮಾಚಲ ಪ್ರದೇಶದಿಂದ ಅಭಿಷೇಕ್ ಮನು ಸಿಂಫ್ಟಿ, ಮಹಾರಾಷ್ಟ್ರದಿಂದ ಚಂದ್ರಕಾಂತ್ ಹಂದೋರೆ ಅವರಿಗೆ ಈಗಾಗಲೇ ಟಿಕೆಟ್ ಘೋಷಿಸಿದೆ. ಬುಧವಾರ ಜೈಪುರಕ್ಕೆ ಬಂದಿಳಿದ ಸೋನಿಯಾ ಗಾಂಧಿ ನಾಮಪತ್ರ ಸಲ್ಲಿಸಿದ್ದಾರೆ.

RELATED ARTICLES

Related Articles

TRENDING ARTICLES