Thursday, January 9, 2025

ಸದನದಲ್ಲಿ ‘ಏನಿಲ್ಲ.. ಏನಿಲ್ಲ..’ ಹಾಡು ಪ್ರಸ್ತಾಪಿಸಿದ ಆರ್. ಅಶೋಕ್

ಬೆಂಗಳೂರು : ಸದನದಲ್ಲಿ ‘ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ, ಏನೇನಿಲ್ಲ’ ಹಾಡು ಸದ್ದು ಮಾಡಿದೆ. ರಾಜ್ಯಪಾಲರ ಭಾಷಣದ ಮೇಲಿನ‌ ಚರ್ಚೆಯ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ವೈರಲ್ ಹಾಡಿನ ಬಗ್ಗೆ ಪ್ರಸ್ತಾಪ ಮಾಡಿ ಕಾಂಗ್ರೆಸ್​ ಪಕ್ಷವನ್ನು ಲೇವಡಿ ಮಾಡಿದ್ದಾರೆ.

ಈ ಕಾಂಗ್ರೆಸ್​ ಸರ್ಕಾರ ಕೆಟ್ಟು ನಿಂತು ಹೋಗಿರುವ ಬಸ್ ಇದ್ದಹಾಗೆ. ಇದೀಗ ಒಂದು ಹಾಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾಂಗ್ರೆಸ್​ ಸರ್ಕಾರದ ಬಗ್ಗೆಯೂ ಹಾಡು ಕೂಡ ಹಾಕಿದ್ದಾರೆ. ಸರ್ಕಾರದಲ್ಲಿ ಹಣವಿಲ್ಲ, ಸತ್ತು ಹೋಗಿದೆ ಎಂದು ಕುಟುಕಿದರು.

ಅದೇ ರೀತಿ ‘ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ, ಏನೇನಿಲ್ಲ..’ ಈ ಸರ್ಕಾರದಲ್ಲಿ ಏನೂ ಇಲ್ಲ. ಈ ರೀತಿ ಸರ್ಕಾರದಲ್ಲಿ ಯಾವುದೇ ಕೆಲಸ ಏನು ಇಲ್ಲ. ಸರ್ಕಾರ ಸರಿಯಾದ ದಾರಿಯಲ್ಲಿ ನಡೆಯುತ್ತಿಲ್ಲ. ಮುಂದೆ ಹೋಗುತ್ತದೆಯೋ? ಇಲ್ಲವೋ? ಎಂಬ ಗ್ಯಾರಂಟಿ ಇಲ್ಲ ಎಂದು ಹಾಡಿನ ಮೂಲಕ ವ್ಯಂಗ್ಯವಾಡಿದ್ದಾರೆ.

RELATED ARTICLES

Related Articles

TRENDING ARTICLES