Sunday, December 22, 2024

ಸುಳ್ಳು ಹೇಳುವುದರಲ್ಲಿ ‘ಸುಳ್ಳು ರಾಮಯ್ಯ’ ಎಕ್ಸ್ ಪರ್ಟ್ : ಪ್ರಲ್ಹಾದ್ ಜೋಶಿ

ಬೆಂಗಳೂರು : ಸುಳ್ಳು ಹೇಳೊದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ಪರ್ಟ್. ಅವರು ಸುಳ್ಳು ರಾಮಯ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕುಟುಕಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ನಡುವಿನ ಜಗಳವನ್ನ‌ ಡೈವರ್ಟ್ ಮಾಡುತ್ತಿದ್ದಾರೆ. ನಮ್ಮ ಪಕ್ಷದಿಂದ ‌ನಿಮಗೆ‌ ಡಾಕ್ಯುಮೆಂಟ್ ಮೇಲ್‌ ಮಾಡ್ತಾರೆ ಎಂದು ಚಾಟಿ ಬೀಸಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಬೇಕಾ..? ತೆಗಳಬೇಕಾ..? ಒಟ್ಟು NDRF 2004 ರಿಂದ 2014 ರವರೆಗೆ 3,655.25 ಕೋಟಿ ರೂಪಾಯಿ. ಪ್ರಧಾನಿ ಮೋದಿ ಅವಧಿಯಲ್ಲ. 2014 ರಿಂದ ಈವರೆಗೆ‌ 12,542 ಕೋಟಿ. ಮೂರು ಪಟ್ಟು ಹೆಚ್ಚಳವಾಗಿದೆ ಎಂದು ಹೇಳಿದರು.

ಮೋದಿ 2.85 ಲಕ್ಷ‌ ಕೋಟಿ‌ ಕೊಟ್ಟಿದ್ದಾರೆ

ಕಾಂಗ್ರೆಸ್​ ಸುಳ್ಳು ಹೇಳುವ ಕ್ಯಾಂಪೇನ್ ಮಾಡುತ್ತಿದೆ. ಸಿಎಂ, ‌ಡಿಸಿಎಂ, ‌ಸಚಿವರು‌, ಶಾಸಕರು ಈ ‌ಕೆಲಸದಲ್ಲಿ ನಿರತರಾಗಿದ್ದಾರೆ. ಅಭಿವೃದ್ಧಿಗೆ ಅನುದಾನ ಇಲ್ಲ ಅಂತ ಮೇಲಿಂದ ಮೇಲೆ‌ ಘೋಷಣೆ‌ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. 2004ರಿಂದ 2014ರವರೆಗೆ 10 ವರ್ಷದಲ್ಲಿ ‌60 ಸಾವಿರ‌ ಕೋಟಿ ಬಂದಿದೆ. ಕಳೆದ10 ವರ್ಷದಲ್ಲಿ ಮೋದಿ ‌ಸರ್ಕಾರ ಕೊಟ್ಟಿರೋದು 2.85 ಲಕ್ಷ ‌ಕೋಟಿ‌ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.

RELATED ARTICLES

Related Articles

TRENDING ARTICLES