Monday, December 23, 2024

ಕ್ರಿಶ್ಚಿಯನ್ನರನ್ನ ವ್ಯಾಟಿಕನ್ ಸಿಟಿಗೆ ಕಳಿಸಬೇಕಾಗುತ್ತೆ : ಪ್ರಮೋದ್ ಮುತಾಲಿಕ್

ದಾವಣಗೆರೆ : ಹಿಂದೂ ದೇವರುಗಳಿಗೆ ಅಪಮಾನ ಮಾಡಿದ್ರೆ, ಮುಂದಿನ ದಿನಗಳಲ್ಲಿ ಹೋರಾಟ ಮಾಡಿ ನಿಮ್ಮನ್ನ (ಕ್ರಿಶ್ಚಿಯನ್ನರನ್ನ) ವ್ಯಾಟಿಗನ್ ಸಿಟಿಗೆ ಕಳಿಸಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.

ಮಂಗಳೂರು ಶಿಕ್ಷಕಿ ರಾಮನ ಬಗ್ಗೆ ಅವಹೇಳನ ಮಾಡಿರುವ ಬಗ್ಗೆ ದಾವಣಗೆರೆಯಲ್ಲಿ ಮಾತನಾಡಿದ ಅವರು, ಕ್ರಿಶ್ಚಿಯನ್​ಗಳು ನಿರಂತರವಾಗಿ ಹಿಂದೂ ದೇವರಗಳು, ಹಿಂದೂ ಗ್ರಂಥಗಳ ಬಗ್ಗೆ ಅವಹೇಳನ ಮಾಡುವ ಪ್ರಕ್ರಿಯೆ ರಾಜ್ಯದಲ್ಲಿ ದೇಶದಲ್ಲಿ ನಡೆಯುತ್ತಲೇ ಇದೆ ಎಂದು ಬೇಸರಿಸಿದರು.

ವಿದ್ಯಾರ್ಥಿಗಳಲ್ಲಿ (ಮಕ್ಕಳಲ್ಲಿ) ಭೇದ ಭಾವ, ಧರ್ಮ, ಜಾತಿ ಇರಲ್ಲ. ಕ್ರಿಶ್ಚಿಯನ್ ಶಾಲೆಯಲ್ಲಿ ಇದನ್ನೇ ಕಲಿಸುತ್ತಾರೆ. ಯೇಸು ಒಬ್ಬನೇ ದೇವರು, ಉಳಿದವರು ಪಾಪಿಗಳು ಎನ್ನುವುದನ್ನು ಕಲಿಸುತ್ತಾರೆ. ಇಡೀ ಜಗತ್ತು ರಾಮನನ್ನು ಪೂಜಿಸುತ್ತಾ ಇದೆ. ಆದ್ರೆ, ರಾಮನ ಬಗ್ಗೆ ಈ ರೀತಿ ಶಿಕ್ಷಕಿ ಹೇಳಿದ್ದು ಅಪರಾಧ ಎಂದು ಕಳವಳ ವ್ಯಕ್ತಪಡಿಸಿದರು.

ಕೇಸ್ ಹಾಕಿ ಒದ್ದು ಒಳಗಡೆ ಹಾಕಬೇಕು

ಶಾಲೆಯಿಂದ ಶಿಕ್ಷಕಿಯನ್ನ ವಜಾ ಮಾಡಿದ್ದಾರೆ. ಕೇಸ್ ಹಾಕಿ ಶಿಕ್ಷಕಿಯನ್ನು ಒದ್ದು ಒಳಗಡೆ ಹಾಕಬೇಕು. ರಾಮನ ನಾಡಿನಲ್ಲಿ ರಾಮನಿಗೆ ಅಪಮಾನ ಮಾಡುವವರನ್ನು ಸುಮ್ಮನೆ ಬಿಡಬಾರದು. ರಾಜ್ಯ ಸರ್ಕಾರ ಕೇಸ್ ಹಾಕಲಿಲ್ಲ ಎಂದರೆ ನಾವು ಶ್ರೀರಾಮ ಸೇನಾದಿಂದ ಕೇಸ್ ಹಾಕಬೇಕಾಗುತ್ತದೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ಸಂದೇಶ ರವಾನಿಸಿದರು.

RELATED ARTICLES

Related Articles

TRENDING ARTICLES