Monday, December 23, 2024

ಜೈನ ಸಮುದಾಯದ ಬೇಡಿಕೆಗಳನ್ನು ತುರ್ತಾಗಿ ಈಡೇರಿಸಬೇಕು : ಸಿದ್ದಸೇನ ಮುನಿ

ಬೆಳಗಾವಿ : ಜೈನ ಸಮುದಾಯದ ಪ್ರಮುಖ ಏಳು ಬೇಡಿಕೆಗಳನ್ನು ರಾಜ್ಯ ಸರ್ಕಾರ ತುರ್ತಾಗಿ ಈಡೇರಿಸಬೇಕು ಎಂದು ಜೈನ್ ಮುನಿ ಬಾಲಾಚಾರ್ಯ 1008 ಆಚಾರ್ಯ ಸಿದ್ದಸೇನ ಮುನಿ ಮಹಾರಾಜರು ಆಗ್ರಹಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ವಿಶ್ವ ಶಾಂತಿಗಾಗಿ ಆಯೋಜನೆ ಮಾಡಿರುವ ‘ಪಂಚ ಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ’ದ ರೂಪುರೇಷೆ ತಯಾರಿ ವೇದಿಕೆ ಪರಿಶೀಲಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ಜೈನ ಧರ್ಮಿಯರ ಪ್ರಮುಖ ಏಳು ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು. ಹಿಂದೆ ಬಿಜೆಪಿ ಸರ್ಕಾರ ಹಾಗೂ ಈಗಿರುವ ಕಾಂಗ್ರೆಸ್ ಸರ್ಕಾರ ಮುಂದೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಹಲವಾರು ಸಚಿವರಿಗೆ ನಮ್ಮ ಬೇಡಿಕೆ ಈಡೇರಿಕೆಗೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಜೈನ ಸಮುದಾಯದ ಬೇಡಿಕೆಗಳೇನು?

ಜೈನ ಧರ್ಮದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಪ್ರತಿ ಜಿಲ್ಲೆಯಲ್ಲಿ ಜೈನ ವಸತಿಗೃಹ ನಿರ್ಮಿಸಬೇಕು. ಬಡವರಿಗೆ ಉಚಿತ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆಗಳನ್ನು ನಿರ್ಮಿಸಬೇಕು. ಪ್ರತಿ ಹಳ್ಳಿಗಳಲ್ಲಿ ಮುನಿ ನಿವಾಸ, ಮಂಗಲ ಕಾರ್ಯಾಲಯ ನಿರ್ಮಿಸಬೇಕು. ಜೈನ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಜೈನ ಮುನಿಗಳ ರಕ್ಷಣೆ ಮಾಡಬೇಕು. ಬಡವರಿಗೆ ಶಿಖರಜಿಗೆ ಹೋಗಲು ಅನುದಾನ ನೀಡಬೇಕು ಎಂಬ ಬೇಡಿಕೆಗಳಿಗೆ ಸರ್ಕಾರ ಆದಷ್ಟು ಬೇಗ ಸ್ಪಂದಿಸಬೇಕು ಎಂದು ಆಚಾರ್ಯ ಸಿದ್ದಸೇನ ಮುನಿ ಮಹಾರಾಜರು ಹಕ್ಕೊತ್ತಾಯ ಮಂಡಿಸಿದ್ದಾರೆ.

RELATED ARTICLES

Related Articles

TRENDING ARTICLES