Wednesday, January 22, 2025

ಕಿಲ್ಲರ್ KSRTCಗೆ ವ್ಯಕ್ತಿ ಬಲಿ : ಕನ್ನಡಿ ಟಚ್ ಆಗಿದ್ದಷ್ಟೇ, ತಲೆ ಮೇಲೆ ಹರಿದ ಬಸ್

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿಬಸ್​ಗಳ ಅಕ್ಕ ಪಕ್ಕ ಹೋಗೋಕೆ ಭಯ ಶುರುವಾಗಿಬಿಡುತ್ತೆ. ಬೆಂಗಳೂರಿನಲ್ಲಿ ಈಗ ಸರ್ಕಾರಿ ಬಸ್ ಗಳು ಯಮ ಕಿಂಕರನಂತಾಗ್ಬಿಟ್ಟಿವೆ. ಒಬ್ಬರಲ್ಲ ಒಬ್ಬರು ಬಸ್​ಗಳಿಗೆ ಬಲಿಯಾಗ್ತಿದ್ದಾರೆ. ಇಷ್ಟು ದಿನ BMTC ಆಯ್ತು. ಇದೀಗ, KSRTC ಸರದಿ.

ಬೆಂಗಳೂರಿನಲ್ಲಿ ಓಡಾಡೋ BMTC, KSRTC ಬಸ್​ಗಳು ಯಮಕಿಂಕರಗಳಂತೆ ಬದಲಾದಂತಿವೆ. ಒಬ್ಬರಲ್ಲ ಒಬ್ಬರು ಬಸ್ ಚಕ್ರಕ್ಕೆ ಸಿಲುಕಿ ಬಲಿಯಾಗ್ತಿದ್ದಾರೆ.

ಇತ್ತೀಚೆಗೆ ಕುವೆಂಪು ಮೆಟ್ರೋ ಸ್ಟೇಷನ್ ಬಳಿ ವಿದ್ಯಾರ್ಥಿಯೊಬ್ರು ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದರು. ಈ ಘಟನೆ ಆಗಿ 10 ದಿನ ಆಗಿಲ್ಲ, ಮತ್ತೆ ಅಂಥದ್ದೇ ಘಟನೆ ನಡೆದಿದೆ. KSRTC ಬಸ್ಸ್​ಗೆ ವ್ಯಕ್ತಿ ಬಲಿಯಾಗಿದ್ದು, ಬಸ್ ಚಕ್ರ ತಲೆ ಮೇಲೆ ಹರಿದು 50 ವರ್ಷದ ವ್ಯಕ್ತಿ ಉಸಿರು ಚೆಲ್ಲಿದ್ದಾರೆ.

ಮೆಟ್ರೋ ನಿಲ್ದಾಣದ ಕೆಳಗೆ ದುರ್ಘಟನೆ

ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಶವಂತಪುರ ಮೆಟ್ರೋ ನಿಲ್ದಾಣದ ಕೆಳಗೆ ಈ ಘಟನೆ ನಡೆದಿದೆ. ತುರುವೆಕೆರೆಯಿಂದ ಬೆಂಗಳೂರು ಕಡೆ ಬರ್ತಿದ್ದ KSRTC ಬಸ್​ನ ಚಕ್ರಕ್ಕೆ ಸಿಲುಕಿ ರಾಜೇಂದ್ರ (50) ಎಂಬಾತ ಸಾವನ್ನಪ್ಪಿದ್ದಾನೆ. ಇವರು ನೆಲಮಂಗಲದ ಪ್ರೆಸ್ಟಿಲ್​ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.

ಬಸ್ ಹಿಂದಿನ ಚಕ್ರ ಹರಿದು ಸ್ಥಳದಲ್ಲೇ ಸಾವು

ರಾಜೇಂದ್ರ ಅವರು ಬೆಳಗ್ಗೆ 10.30ರ ಸುಮಾರಿಗೆ ಜಿಎಸ್​ಟಿ ಕಚೇರಿಗೆ ಮೊಪ್ಯಾಡೋ ಬೈಕ್ ನಲ್ಲಿ ಹೋಗ್ತಿದ್ರು. ಯಶವಂತಪುರ ಮಾರ್ಗದ ಮೂಲಕ ಹೋಗೋವಾಗ ಮೆಟ್ರೋ ನಿಲ್ದಾಣದ ಕೆಳಗಡೆ KSRTC ಬಸ್ ಪಕ್ಕ ಹೋಗೋವಾಗ ಮೊಪ್ಯಾಡೋ ಬೈಕ್​ನ ಕನ್ನಡಿ ಬಸ್​ಗೆ ಟಚ್ ಆದ ಪರಿಣಾಮ ಸ್ಕಿಡ್ ಆಗಿದ್ದು, ಬಸ್​ನ ಹಿಂದಿನ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಒಂದು ಕ್ಷಣದ ನಿರ್ಲಕ್ಷ್ಯಕ್ಕೆ ಜೀವ ಹೋಯ್ತು

ಇಲ್ಲಿ ಮೇಲ್ನೋಟಕ್ಕೆ KSRTC ಬಸ್ ಚಾಲಕನ ನಿರ್ಲಕ್ಷ್ಯ ಅನ್ನೋದು ಗೊತ್ತಾಗಿದ್ದು, ಈತನನ್ನ ವಶಪಡೆದಿರೋ ಯಶವಂತಪುರ ಸಂಚಾರಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ. ಬಸ್ ಅಕ್ಕ ಪಕ್ಕ ಹೋದಾಗ ಇಂತಹ ಘಟನೆಗಳು ಆಗುತ್ತಲೇ ಇವೆ. ಒಂದು ಕ್ಷಣದ ನಿರ್ಲಕ್ಷ್ಯ ಜೀವ ಕಳೆದುಕೊಳ್ಳುತ್ತಿದ್ದಾರೆ. ಕೆಲ ಬಸ್ ಚಾಲಕರಂತೂ ಪಕ್ಕ ಬೈಕ್​ಗಳು ಬಂದ್ರೆ ಸಾಕು ಬೇಕು ಅಂತಲೇ ಸೈಡ್ ಎಳೆದು ಬೈಕ್ ಸವಾರರ ಸಾವಿಗೆ ಕಾರಣ ಆಗ್ತಿದ್ದಾರೆ. ಯಾವುದಕ್ಕೂ ಬಸ್ ಅಥವಾ ಹೆವಿ ವೆಹಿಕಲ್​ಗಳ ಅಕ್ಕ ಪಕ್ಕ ಹೋಗೋವಾಗ ಕೊಂಚ ಹುಷಾರು..!

RELATED ARTICLES

Related Articles

TRENDING ARTICLES