Friday, January 10, 2025

ಸಂಚಾರಿ ನಿಯಮ ಉಲ್ಲಂಘನೆ :30 ಸಾವಿರದ ಸ್ಕೂಟರ್​ಗೆ ₹3 ಲಕ್ಷ ಟ್ರಾಫಿಕ್​​​ ದಂಡ!

ಬೆಂಗಳೂರು: ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಬರೋಬ್ಬರು 3 ಲಕ್ಷ ರೂ. ದಂಡ ವಿಧಿಸಿರುವ ಸಂಚಾರಿ ಪೊಲೀಸರು ಹಣ ವಸೂಲಿಗಾಗಿ ಸ್ಕೂಟರ್​ ಮಾಲೀಕನ ಮನೆಗೆ ಭೇಟಿ ನೀಡಿರುವ ಘಟನೆ ನಗರದ ಸುಧಾಮ ನಗರದಲ್ಲಿ ನಡೆದಿದೆ.

ಸ್ಕೂಟರ್ ಮಾಲೀಕ ವೆಂಕಟರಾಮನ್​ ಎಂಬುವವರಿಗೆ ಸೇರಿಧ KA-05 KF-7969 ನಂಬರಿನ ಆ್ಯಕ್ವೀವ್ ಹೋಂಡಾ ದ್ವಿಚಕ್ರ ವಾಹನದಲ್ಲಿ ಬರೊಬ್ಬರಿ 300 ಕ್ಕೂ ಹೆಚ್ಚು ಬಾರಿ ಸಂಚರಿಸಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದರಲ್ಲಿ ಸಿಗ್ನಲ್ ಜಂಪ್, ವಾಹನದಲ್ಲಿ ಸಂಚರಿಸುವಾಗ ಹೆಲ್ಮೆಟ್​ ಧರಿಸದೇ ಇರುವುದು, ಸಂಚಾರದ ವೇಳೆ ಮೊಬೈಲ್​ ಬಳಕೆ ಸೇರಿ 300 ಕ್ಕೂ ಹೆಚ್ಚು ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದು ಒಟ್ಟು 3 ಲಕ್ಷರೂ ಗಳ ದಂಡ ಸ್ಕೂಟರ್ ಮಾಲೀಕ ವೆಂಕಟರಾಮನ್ ಅವರ ಮೇಲೆ ಬಿದ್ದಿದೆ.

ಇದನ್ನೂ ಓದಿ:  ಈಶ್ವರಪ್ಪ ಅವರ ಹಿರಿತನಕ್ಕೆ ಬೆಲೆ ಕೊಟ್ಟು ನೀವು ತಾವು ಅಂತ ಮಾತನಾಡುತ್ತಿದ್ದಾನೆ ನೆನಪಿರಲಿ: ಪ್ರಿಯಾಂಕ್​ ಖರ್ಗೆ

ಸಂಚಾರಿ ನಿಯಮ ಉಲ್ಲಂಘಿಸಿ 50 ಸಾವಿರಕ್ಕೂ ಹೆಚ್ಚು ಮೊತ್ತದ ದಂಡವಿದ್ದಲ್ಲಿ ಸಂಚಾರಿ ಪೋಲೀಸರು ಮನೆಗೆ ಭೇಟಿ ನೀಡಿ ದಂಡ ವಸೂಲಿ ಮಾಡುತ್ತಾರೆ ಎನ್ನುವ ನಿಯಮವನ್ನು ಇಲಾಖೆ ಜಾರಿಗೆ ತಂದಿದೆ. ಈ ಹಿನ್ನೆಲೆ ಸಂಚಾರಿ ನಿಯಮ ಉಲ್ಲಂಘಿಸಿದ ವೆಂಕಟರಾಮನ್​ ಅವರ ಮನೆಗೆ ಭೇಟಿ ನೀಡಿರುವ ಸಂಚಾರಿ ಪೊಲೀಸರು ಸುಮಾರು 3 ಲಕ್ಷ ದಂಡ ಕಟ್ಟುವಂತೆ ಬಿಲ್​ ನೀಡಿದ್ದಾರೆ.

3 ಲಕ್ಷ ದಂಡದ ಬಿಲ್ ಕಂಡು ಗಾಬರಿಯಾಗಿರುವ ವೆಂಕಟರಾಮನ್ ಹಣ ಕಟ್ಟಲು ಆಗುವುದಿಲ್ಲ ಬೇಕಿದ್ದರೇ ನನ್ನ ಬೈಕ್ ತೆಗೆದುಕೊಂಡು ಹೋಗಿ ಎಂದಿದ್ದಾರೆ. ಇದಕ್ಕೊಪ್ಪದ ಪೊಲೀಸರು ದಂಡ ಕಟ್ಟುವಂತೆ ನೋಟೀಸ್​ ನೀಡಿದ್ದಾರೆ. ಕಟ್ಟದಿದಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES