ಬೆಂಗಳೂರು: ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಬರೋಬ್ಬರು 3 ಲಕ್ಷ ರೂ. ದಂಡ ವಿಧಿಸಿರುವ ಸಂಚಾರಿ ಪೊಲೀಸರು ಹಣ ವಸೂಲಿಗಾಗಿ ಸ್ಕೂಟರ್ ಮಾಲೀಕನ ಮನೆಗೆ ಭೇಟಿ ನೀಡಿರುವ ಘಟನೆ ನಗರದ ಸುಧಾಮ ನಗರದಲ್ಲಿ ನಡೆದಿದೆ.
ಸ್ಕೂಟರ್ ಮಾಲೀಕ ವೆಂಕಟರಾಮನ್ ಎಂಬುವವರಿಗೆ ಸೇರಿಧ KA-05 KF-7969 ನಂಬರಿನ ಆ್ಯಕ್ವೀವ್ ಹೋಂಡಾ ದ್ವಿಚಕ್ರ ವಾಹನದಲ್ಲಿ ಬರೊಬ್ಬರಿ 300 ಕ್ಕೂ ಹೆಚ್ಚು ಬಾರಿ ಸಂಚರಿಸಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದರಲ್ಲಿ ಸಿಗ್ನಲ್ ಜಂಪ್, ವಾಹನದಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸದೇ ಇರುವುದು, ಸಂಚಾರದ ವೇಳೆ ಮೊಬೈಲ್ ಬಳಕೆ ಸೇರಿ 300 ಕ್ಕೂ ಹೆಚ್ಚು ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದು ಒಟ್ಟು 3 ಲಕ್ಷರೂ ಗಳ ದಂಡ ಸ್ಕೂಟರ್ ಮಾಲೀಕ ವೆಂಕಟರಾಮನ್ ಅವರ ಮೇಲೆ ಬಿದ್ದಿದೆ.
ಇದನ್ನೂ ಓದಿ: ಈಶ್ವರಪ್ಪ ಅವರ ಹಿರಿತನಕ್ಕೆ ಬೆಲೆ ಕೊಟ್ಟು ನೀವು ತಾವು ಅಂತ ಮಾತನಾಡುತ್ತಿದ್ದಾನೆ ನೆನಪಿರಲಿ: ಪ್ರಿಯಾಂಕ್ ಖರ್ಗೆ
ಸಂಚಾರಿ ನಿಯಮ ಉಲ್ಲಂಘಿಸಿ 50 ಸಾವಿರಕ್ಕೂ ಹೆಚ್ಚು ಮೊತ್ತದ ದಂಡವಿದ್ದಲ್ಲಿ ಸಂಚಾರಿ ಪೋಲೀಸರು ಮನೆಗೆ ಭೇಟಿ ನೀಡಿ ದಂಡ ವಸೂಲಿ ಮಾಡುತ್ತಾರೆ ಎನ್ನುವ ನಿಯಮವನ್ನು ಇಲಾಖೆ ಜಾರಿಗೆ ತಂದಿದೆ. ಈ ಹಿನ್ನೆಲೆ ಸಂಚಾರಿ ನಿಯಮ ಉಲ್ಲಂಘಿಸಿದ ವೆಂಕಟರಾಮನ್ ಅವರ ಮನೆಗೆ ಭೇಟಿ ನೀಡಿರುವ ಸಂಚಾರಿ ಪೊಲೀಸರು ಸುಮಾರು 3 ಲಕ್ಷ ದಂಡ ಕಟ್ಟುವಂತೆ ಬಿಲ್ ನೀಡಿದ್ದಾರೆ.
3 ಲಕ್ಷ ದಂಡದ ಬಿಲ್ ಕಂಡು ಗಾಬರಿಯಾಗಿರುವ ವೆಂಕಟರಾಮನ್ ಹಣ ಕಟ್ಟಲು ಆಗುವುದಿಲ್ಲ ಬೇಕಿದ್ದರೇ ನನ್ನ ಬೈಕ್ ತೆಗೆದುಕೊಂಡು ಹೋಗಿ ಎಂದಿದ್ದಾರೆ. ಇದಕ್ಕೊಪ್ಪದ ಪೊಲೀಸರು ದಂಡ ಕಟ್ಟುವಂತೆ ನೋಟೀಸ್ ನೀಡಿದ್ದಾರೆ. ಕಟ್ಟದಿದಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.