ತುಮಕೂರು : ಕಳಚಿತು ಕಲ್ಪತರು ನಾಡಿನ ಸಾಹಿತ್ಯ ಲೋಕದ ಮತ್ತೊಂದು ಕೊಂಡಿ. ಸಾಹಿತಿ, ಕವಿ, ನಾಟಕಕಾರ ಹಾಗೂ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾಗಿದ್ದ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ (80) ಅವರು ನಿಧನರಾಗಿದ್ದಾರೆ.
ಅನಾರೋಗ್ಯದ ಕಾರಣ ಭಾನುವಾರ ಸಂಜೆ ಇಹಲೋಕ ತ್ಯಜಿಸಿದ್ದು, ಪತ್ನಿ, ಮಕ್ಕಳು, ಮೊಮ್ಮಕ್ಕಳನ್ನು ಅಗಲಿದ್ದಾರೆ. 60 ವರ್ಷಗಳಿಗಿಂತಲೂ ಹೆಚ್ಚಿನ ಕಾಲ ಸಾಹಿತ್ಯ ಬರವಣಿಗೆ, ಸಂಘಟನೆ, ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಡಾ. ಕವಿತಾಕೃಷ್ಣ 190ಕ್ಕಿಂತಲೂ ಹೆಚ್ಚಿನ ಕೃತಿಗಳನ್ನು ರಚಿಸಿ ಜಿಲ್ಲೆಯ ದಿಗ್ಗಜ ಕವಿ ಎನಿಸಿಕೊಂಡಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಮಾತ್ರವಲ್ಲದೇ ಇಡೀ ರಾಜ್ಯಾದ್ಯಂತ ಅಪಾರ ಶಿಷ್ಯ ಬಳಗ, ಅಭಿಮಾನ ಬಳಗ ಸಂಪಾದಿಸಿದ್ದಾರೆ. ಇವರು, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ರಾಜ್ಯ ನಾಟಕಕಾರರ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಒಂದೇ ದಿನ ಒಂದೇ ವೇದಿಕೆಯಲ್ಲಿ 33 ಕೃತಿ ಬಿಡುಗಡೆ
ಸಹಕಾರಿ ಸಾಹಿತ್ಯ ಪ್ರಕಾಶನ ಆರಂಭಿಸಿ ಹಲವು ಉದಯೋನ್ಮುಖ ಲೇಖಕರ ಕೃತಿ ಪ್ರಕಟಿಸಿರುವ ಹೆಗ್ಗಳಿಕೆಯೂ ಇದೆ. ಒಂದೇ ದಿನ ಒಂದೇ ವೇದಿಕೆಯಲ್ಲಿ 33 ಕೃತಿ ಬಿಡುಗಡೆ ಮಾಡಿದ ದಾಖಲೆಯೂ ಇದೆ. ರಾಜ್ಯ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ, ಜ್ಞಾನಬುತ್ತಿ ಸ್ಥಾಪಕ ಅಧ್ಯಕ್ಷ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ ಕವಿತಾಕೃಷ್ಣ ಸೇವೆ ಸಲ್ಲಿಸಿದ್ದಾರೆ.
ಡಾ.ರಾಜಕುಮಾರ್ ಅವರಿಗೆ ದಾದ ಫಾಲ್ಕೆ ಪ್ರಶಸ್ತಿ ಬಂದಾಗ ತುಮಕೂರಿನಲ್ಲಿ ಕವಿತಾಕೃಷ್ಣರಿಂದ ಗೌರವ.
ಡಾ.ರಾಜ್ ಕುಮಾರ್ ಅವರ ಆಲಿಂಗನದಲ್ಲಿ ಡಾ.ಕವಿತಾಕೃಷ್ಣ
ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳೊಂಡಿದೆ ಡಾ. ಕವಿತಾಕೃಷ್ಣ
ನಟ ಜಗ್ಗೇಶ್ ಅವರೊಂದಿಗೆ ಡಾ. ಕವಿತಾಕೃಷ್ಣ
ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮಿ ಹಾಗೂ ಲಿಂಗೈಕ್ಯ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿಗಳೊಂದಿಗೆ ಕವಿತಾಕೃಷ್ಣ