Monday, December 23, 2024

ನಿವೇಶನ ವಿಚಾರ.. ‘ಕೊಡಲಿ, ರಾಡ್, ಬ್ಯಾಟ್’ ಹಿಡಿದು ‘ಮಹಿಳೆ, ಮಕ್ಕಳು, ವೃದ್ಧ’ರ ಹೊಡೆದಾಟ

ರಾಯಚೂರು : ನಮಗೆ ಸೇರಿದ ನಿವೇಶನವನ್ನುಯಾಕೆ ಒತ್ತುವರಿ ಮಾಡ್ತಿದ್ದೀರಿ ಎಂದು ಕೇಳಿದ್ದಕ್ಕೆ ಅಲ್ಲಿ ಕುರುಕ್ಷೇತ್ರವೇ ನಡೆದು ಹೋಗಿದೆ.

ಜಾಗದ ಮಾಲೀಕನ ಹಾಗೂ ಕುಟುಂಬಸ್ಥರ ಮೇಲೆ 15 ಜನರ ಗುಂಪು ಮುಗಿಬಿದ್ದು ಹಲ್ಲೆ ನಡೆಸಿದೆ. ರಾಡು, ದೊಣ್ಣೆ, ಕೋಲು, ಕಲ್ಲು ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮಲ್ಲಿಕಾರ್ಜುನ ಎಂಬುವವರ ತಂದೆಯ ಹೆಸರಲ್ಲಿ ಇರುವ ನಿವೇಶನವನ್ನು ಅದೇ ಗ್ರಾಮದ ಹುಲ್ಲುಗಪ್ಪ, ಅಭಿಷೇಕ್, ಚಂದ್ರಶೇಖರ್​, ಲಿಂಗಾರೆಡ್ಡಿ, ಅರುಣ್ ಕುಮಾರ್ ಎಂಬುವವರು ಒತ್ತುವರಿ ಮಾಡುತ್ತಿದ್ರು. ಈ ವೇಳೆ ನನ್ನ ಸ್ಥಳವನ್ನು ಯಾಕೆ ಒತ್ತುವರಿ ಮಾಡುತ್ತಿದ್ದೀರಿ ಎಂದು ಮಲ್ಲಿಕಾರ್ಜುನ್​ ಕೇಳಿದ್ದಾರೆ ಅಷ್ಟೇ. 15 ಜನರು ಸೇರಿಕೊಂಡು ಏಕಾಏಕಿ ಮಲ್ಲಿಕಾರ್ಜುನನ ಕುಟುಂಬದ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

15 ಮಂದಿ ಗುಂಪು ಕಟ್ಟಿಕೊಂಡು ಬಂದು ಹಲ್ಲೆ

ಇನ್ನು ಈ ಹಿಂದೆಯೂ ಕೂಡ ಇದೇ ವಿಚಾರಕ್ಕೆ ಗಲಾಟೆಯಾಗಿತ್ತು. ಆಗ ಮಾನ್ವಿ ಪೊಲೀಸರು ಒತ್ತುವರಿ ಮಾಡಿದವರಿಗೆ ಬುದ್ದಿಹೇಳಿ, ಸಂಧಾನ ಮಾಡಿ ಕಳುಹಿಸಿದ್ರು. ಅದೇ ಸಿಟ್ಟು ಇಟ್ಟುಕೊಂಡು 15 ಮಂದಿ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ್ರು.

ಘಟನೆ ಬಳಿಕವೂ ಪೊಲೀಸರು ಮೌನ?

ಇನ್ನು ಹಾಡಹಗಲೇ ಇಷ್ಟೆಲ್ಲ ರಾದ್ಧಾಂತ ನಡೆದಿದ್ರೂ ಪೊಲೀಸರು ಯಾವುದೇ ರೀತಿ ಕ್ರಮಕ್ಕೆ ಮುಂದಾಗಿಲ್ಲ. ಈ ಬಗ್ಗೆ ಪೊಲೀಸರನ್ನು ಕೇಳಿದ್ರೆ ನಮಗೆ ಇನ್ನು ಯಾವುದು ದೂರು ಬಂದಿಲ್ಲ, ದೂರು ನೀಡಿದ ನಂತರ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ.

RELATED ARTICLES

Related Articles

TRENDING ARTICLES