Sunday, December 22, 2024

ಡಿಕೆಶಿ ಜೈಲಿಗೆ.. ಈಶ್ವರಪ್ಪ ಹೈಕೋರ್ಟ್ ಸಿಜೆನಾ? ಸುಪ್ರೀಂ ಕೋರ್ಟ್ ಸಿಜೆನಾ? : ಎಂ.ಬಿ ಪಾಟೀಲ್

ಬೆಂಗಳೂರು : ಡಿ.ಕೆ. ಶಿವಕುಮಾರ್ ಗೂಂಡಾ ಡಿಸಿಎಂ, ಇಷ್ಟರಲ್ಲೇ ಮತ್ತೆ ತಿಹಾರ್ ಜೈಲಿಗೆ ಹೋಗ್ತಾರೆ ಎಂಬ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಸಚಿವ ಎಂ.ಬಿ. ಪಾಟೀಲ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೆ.ಎಸ್. ಈಶ್ವಪಪ್ಪ ಹೈಕೋರ್ಟ್ ಸಿಜೆನಾ? ಅಥವಾ ಸುಪ್ರೀಂ ಕೋರ್ಟ್ ಸಿಜೆ ಆಗಿದ್ದಾರಾ? ಎಂದು ವಾಗ್ದಾಳಿ ನಡೆಸಿದ್ದಾರೆ.

ಈಶ್ವರಪ್ಪ ಅವರು ಹಿರಿಯರು ಇದ್ದಾರೆ. ಸರಿಯಾಗಿ ಮಾತನಾಡಬೇಕಾಗುತ್ತದೆ. ಅದನ್ನೆಲ್ಲ ಹೇಳೋಕೆ ಈಶ್ವರಪ್ಪ ಯಾರು..? ಕಾನೂನು ಪ್ರಕಾರ ಏನಾಗುತ್ತೋ ಅದು ಆಗುತ್ತೆ. ಈಶ್ವರಪ್ಪ ಅವರು ಜಡ್ಜ್ ಆಗಿದ್ದಾರಾ..? ಜೈಲಿಗೆ ಹೋಗೋದು ಬರೋದು ಹೇಳೊದಕ್ಕೆ ಇವರು ಯಾರು..? ಎಂದು ಪ್ರಶ್ನೆ ಮಾಡಿದ್ದಾರೆ.

ಅಮಿತ್ ಶಾ ಅವರು ನಮ್ಮ ರಾಜ್ಯಕ್ಕೆ ಬಂದಿದ್ದಾರೆ. ಬರದಿಂದ ಜನ ತತ್ತರಿಸಿ ಹೋಗಿದ್ದಾರೆ. ಕೇಂದ್ರದ ಟೀಂ ಬಂದು ಹೋಗಿದ್ದಾರೆ. ಅಲ್ಪ ಸ್ವಲ್ಪ ಹಣವಾದರೂ ಕೊಡಬೇಕು, ಅದನ್ನೂ ಕೊಟ್ಟಿಲ್ಲ. ಯಾವುದಕ್ಕೂ ಅವರು ಸ್ಪಂದನೆ ಇಲ್ಲ. ಇದನ್ನ ಮಾಧ್ಯಮದವರು ಅಮಿತ್ ಶಾರಿಗೆ ಕೇಳಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯನ್ನ ಅಮಿತ್ ಶಾ ಅವರಿಗೆ ಮಾಧ್ಯಮದವರು ಮನವರಿಕೆ ಮಾಡಬೇಕು. ನಾವು ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿದ್ದೇವೆ. ಅನುದಾನ ವಿಚಾರವಾಗಿ ಅನ್ಯಾಯ ಆಗ್ತಾ ಇದೆ ಎಂದು ಬೇಸರಿಸಿದ್ದಾರೆ.

ಬಜೆಟ್ ಗಿಂತ ಮುಂಚಿತವಾಗಿ ಆಯಾಯ ಇಲಾಖೆಗಳ ಸಭೆಯನ್ನ ಕರೆದಿದ್ದೆವು. ಅವರ ಬೇಡಿಕೆಗಳನ್ನ ಇಂದು ಸಿಎಂ ಸಿದ್ದರಾಮಯ್ಯ ಆಲಿಸಿದ್ದಾರೆ. ಎಲ್ಲಾ ಟ್ರೇಡ್ ಬಾಡಿಗಳು ಭಾಗವಹಿಸಿದ್ದರು. ಇದೆಲ್ಲವನ್ನ ಗಮನಹರಿಸಿದ್ದೇವೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES