ಬೆಂಗಳೂರು : ಐಸಿಸಿ ಅಂಡರ್-19 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ 245 ರನ್ಗಳ ಟಾರ್ಗೆಟ್ ನೀಡಿದೆ.
ದಕ್ಷಿಣ ಆಫ್ರಿಕಾದ ಬೆನೋನಿಯ ವಿಲ್ಲಮೂರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ನಡೆಸಿತು.
ನಿಗದಿತ 50 ಓವರ್ಗಳಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡು 253 ರನ್ಗಳ ಸವಾಲಿನ ಮೊತ್ತ ದಾಖಲಿಸಿತು. ಆಸಿಸ್ ಪರ ಹರ್ಜಾಸಿಂಗ್ 55, ಹಗ್ ವೈಬ್ಜೆನ್ 48, ಹ್ಯಾರಿ ದಿಕ್ಸೋನ್ 42, ಆಲಿವರ್ ಪೀಕ್ ಅಜೇಯ 46 ರನ್ ಗಳಿಸಿದರು.
ಭಾರತದ ಬೌಲಿಂಗ್ ದಾಳಿಗೆ ಆಸಿಸ್ನ ಉಳಿದ ಬ್ಯಾಟರ್ಗಳು ಉತ್ತಮ ಪ್ರದರ್ಶನ್ ನೀಡುವಲ್ಲಿ ವಿಫಲರಾದರು. ಭಾರತದ ಪರ ರಾಜ್ ಲಿಂಬಾನಿ 3, ನಮನ್ ತಿವಾರಿ 2, ಸೌಮಿ ಪಾಂಡೆ ಹಾಗೂ ಮುಶೀರ್ ಖಾನ್ ತಲಾ ಒಂದು ವಿಕೆಟ್ ಪಟಡೆದು ಮಿಂಚಿದರು.
ಭಾರತ ತಂಡ
ಆದರ್ಶ್ ಸಿಂಗ್, ಅರ್ಶಿನ್ ಕುಲಕರ್ನಿ, ಪ್ರಿಯಾಂಶು ಮೊಲಿಯಾ, ಉದಯ್ ಸಹರಾನ್(ನಾಯಕ), ಸಚಿನ್ ದಾಸ್, ಮುಶೀರ್ ಖಾನ್, ಅರವೆಲ್ಲಿ ಅವನೀಶ್, ಮುರುಗನ್ ಅಭಿಷೇಕ್, ರಾಜ್ ಲಿಂಬಾನಿ, ನಮನ್ ತಿವಾರಿ, ಸೌಮಿ ಪಾಂಡೆ
Innings Break!#TeamIndia need 2⃣5⃣4⃣ to win the #U19WorldCup!
3⃣ wickets for Raj Limbani
2⃣ wickets for Naman Tiwari
A wicket each for Saumy Pandey & Musheer KhanOver to our batters 🙌
Scorecard ▶️ https://t.co/RytU4cGJLu#U19WorldCup | #INDvAUS pic.twitter.com/4SnelO2HMi
— BCCI (@BCCI) February 11, 2024