ಹಾಸನ : ಯವನ್ ಹತ್ರಾನಾದ್ರು ಅರ್ಧಪೈಸೆ ತೆಗೆದುಕೊಂಡಿರೋ ಆರೋಪ ನನ್ನ ಮೇಲಿದ್ದರೇ ಬಂದು ಯಾವುದಾದರೂ ದೇವಸ್ಥಾನದಲ್ಲಿ ಪ್ರಮಾಣ ಮಾಡಲಿ ನಾನು ರಾಜಕೀಯವನ್ನೇ ಬಿಟ್ಟು ಬಿಡ್ತೀನಿ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದರು.
ಇದನ್ನೂ ಓದಿ: ಸುತ್ತೂರು ಮಠದ ನಿಸ್ವಾರ್ಥ ಸೇವೆಗೆ ಕೇಂದ್ರ ಸಚಿವ ಅಮಿತ್ ಶಾ ಶ್ಲಾಘನೆ!
ಕಂಟ್ರಾಕ್ಟರ್ಸ್ ಅಸೋಷಿಯೇಷನ್ ನ ಅಧ್ಯಕ್ಷ ಕೆಂಪಣ್ಣ ಅವರ 40% ಕಮಿಷನ್ ಆರೋಪದ ಕುರಿತು ಮಾದ್ಯಮದವರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾಲಿಗೆ ಹೇಗೆ ಬೇಕಾದರೂ ತಿರುಗುತ್ತೆ, ಎಲುಬಿಲ್ಲದ ನಾಲಿಗೆ ಆಚಾರವಿಲ್ಲದೆ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ಅಂತಾರೇ, ಪ್ರಮಾಣಿಕತೆಯಲ್ಲಿ ನಾನು ಯಾರಿಗೇನು ಕಡಿಮೆಯಿಲ್ಲ, ಯಾರೆಲ್ಲಾ ಆರೋಪ ಮಾಡ್ತರಲ್ಲ, ಅವರು ಮೊದಲು ಆತ್ಮಾವಲೋಕನಾ ಮಾಡಿಕೊಳ್ಳಲಿ ಎಂದು ಹೇಳಿದರು.
ಕೆ.ಎನ್.ರಾಜಣ್ಣ ಕೆಪಿಸಿಸಿ ಅಧ್ಯಕ್ಷರ ತರ ಆಡ್ತಿದ್ದಾರೆ ಎಂಬ ಬಿ.ಶಿವರಾಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ,
ಅದು ನನ್ನ ಇಷ್ಟ, ನಾನು ಯಾರಿಗೆ ಹೆದರಬೇಕು ಹೆದರುತ್ತೀನಿ ಐ ಆ್ಯಮ್ ಲಾಯಲ್, ಐ ಆ್ಯಮ್ ಒಬಿಡಿಯೆಂಟ್ ಟು ಹೈಕಮಾಂಡ್ ಟ್ ದಿ ಸ್ಲೇವ್ ಇದನ್ನು ಪದೇ ಪದೇ ಹೇಳಿದ್ದಿನಿ ಎಂದು ಅವರು ಹೇಳಿದರು.