ಮೈಸೂರು : ಈಶ್ವರಪ್ಪರಿಗೆ ಒಂದು ರೌಂಡ್ ಸೆಟ್ಲಮೆಂಟ್ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತಿರುಗೇಟು ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿ.ಕೆ. ಶಿವಕುಮಾರ್ ಒಬ್ಬ ಗೂಂಡಾ ಡಿಸಿಎಂ, ಮತ್ತೆ ಜೈಲಿಗೆ ಹೋಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಜ್ಯದ ಡಿಸಿಎಂ ತಮ್ಮ ಡಿ.ಕೆ. ಸುರೇಶ್ ಸಂಸದ ಎನ್ನುವ ಅಹಂಕಾರದಿಂದ ಹೇಳಿಕೆ ಕೊಟ್ಟಿದ್ದಾರೆ. ದಕ್ಷಿಣ ಭಾರತ ಬೇರೆ ರಾಷ್ಟ್ರ ಕೇಳಬೇಕಾಗುತ್ತೆ ಎಂದಿದ್ದಾರೆ. ಅವರು ಈ ಹೇಳಿಕೆ ಕೊಟ್ಟ ಕೂಡಲೇ ಅವರನ್ನ ಬಂಧಿಸಬೇಕಿತ್ತು. ಅವರ ಹೇಳಿಕೆಯನ್ನು ಕಾಂಗ್ರೆಸ್ ನಾಯಕರೇ ತಿರಸ್ಕಾರ ಮಾಡಿದ್ರು. ಆದ್ರೆ, ಡಿಸಿಎಂ ಎನ್ನುವ ಅಹಂಕಾರದಲ್ಲಿ ಡಿಕೆಶಿ ನನಗೆ ಸೆಟಲ್ ಮೆಂಟ್ ಮಾಡ್ತಾರಂತೆ ಎಂದು ಕಿಡಿಕಾರಿದ್ದಾರೆ.
ಪೂರ್ಣ ಸೆಟ್ಟಲ್ ಮೆಂಟ್ ಸಿಗುತ್ತೆ
ಅರ್ಧ ಸೆಟಲ್ ಮೆಂಟ್ ಮಾಡ್ತಿವಿ, ಇನ್ನೂ ಅರ್ಧ ಇದೆ ಅಂದಿದ್ದಾರೆ. ಈತ ಒಬ್ಬ ಗೂಂಡಾ ಉಪಮುಖ್ಯಮಂತ್ರಿ. ಇಂತಹ ಗೊಡ್ಡು ಬೆದರಿಕೆಗೆ ನಾನು ಬಗ್ಗುವುದಿಲ್ಲ. ಅವರ ಅರ್ಧ ಸೆಟ್ಟಲ್ ಮೆಂಟ್ ಇಡಿ ಮಾಡಿದೆ. ಅವರು ತಿಹಾರ್ ಜೈಲಿನಲ್ಲಿ ಸೆಟಲ್ ಮೆಂಟ್ ತೆಗೆದುಕೊಂಡಿದ್ದಾರೆ. ಮತ್ತೆ ಜೈಲಿಗೆ ಹೋಗುವ ಮೂಲಕ ಉಳಿದ ಸೆಟ್ಟಲ್ ಮೆಂಟ್ ತೆಗೆದುಕೊಳ್ತಾರೆ. ಅವರಿಗೆ ಪೂರ್ಣ ಸೆಟ್ಟಲ್ ಮೆಂಟ್ ಸಿಗುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಡಿಕೆಶಿ ಜೈಲಿಗೆ ಹೋಗಿ ಬಂದಿದ್ದಾರೆ
ನನಗೆ ನೋಟಿಸ್ ಕೊಟ್ಟಿದ್ರೆ ನಾನು ಹೆದರಲ್ಲ. ಎಲ್ಲಾ ನೋಟಿಸ್ ಹಾಗೂ ಎಫ್ಐಆರ್ ಹಾಕಿದ್ದಾರೆ. ನಾನು ಕೋರ್ಟ್ಗೂ ಹೋಗಿದ್ದು ಬಂದಿದ್ದೇನೆ. ನನಗೆ ಒಂದು ರೂಪಾಯಿ ದಂಡ ಬಿದ್ದಿಲ್ಲ. ಆದರೆ, ಸಿಎಂ ಸಿದ್ದರಾಮಯ್ಯರಿಗೆ ಕೋರ್ಟ್ 10 ಸಾವಿರ ದಂಡ ವಿಧಿಸಿದೆ. ಡಿಸಿಎಂ ಡಿಕೆಶಿ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪ ಕುಟುಕಿದ್ದಾರೆ.