ತುಮಕೂರು: ಅಳಿಯ-ಮಗಳ ಜಗಳದಲ್ಲಿ ಅತ್ತೆ ಕೊಲೆಯಾಗಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯ ಕೊಡಿಗೇನಹಳ್ಳಿಯಲ್ಲಿ ನಡೆದಿದೆ.
ಅಶ್ವಿತ್ ಉನ್ನಿಸಾ (58) ಕೊಲೆಯಾದ ಮಹಿಳೆ. ಹತ್ಯೆಯಾದ ಮಹಿಳೆಯ ಮಗಳು ಹಾಗೂ ಅಳಿಯನ ನಡುವೆ ಜಗಳ ನಡೆಯುತ್ತಿತ್ತು. ಈ ವೇಳೆ ಜಗಳ ಬಿಡಿಸಲು ಯತ್ನಿಸಿದ ಮಹಿಳೆಯ ತಲೆಗೆ ಅಳಿಯ ದೊಣ್ಣೆಯಿಂದ ಹೊಡೆದ ಪರಿಣಾಮ ಆಕೆ ಸಾವಿಗೀಡಾಗಿದ್ದಾಳೆ.
ಇದನ್ನೂ ಓದಿ: ಸಂಚಾರಿ ನಿಯಮ ಉಲ್ಲಂಘನೆ :30 ಸಾವಿರದ ಸ್ಕೂಟರ್ಗೆ ₹3 ಲಕ್ಷ ಟ್ರಾಫಿಕ್ ದಂಡ!
ಹತ್ಯೆಯಾದ ಅಶ್ವಿತ್ ಉನ್ನಿಸಾಳ ಮಗಳನ್ನು ಕೊಡಿಗೇನಹಳ್ಳಿಯ ಸೈಯದ್ ಸುಹೇಲ್‍ನೊಂದಿಗೆ ಮದುವೆ ಮಾಡಲಾಗಿತ್ತು. ಮದುವೆಯ ಬಳಿಕ ಅವರಿಬ್ಬರ ನಡುವೆ ನಿರಂತರ ಜಗಳ ನಡೆಯುತ್ತಿತ್ತು. ಎಂದಿನಂತೆ ಜಗಳ ವಿಕೋಪಕ್ಕೆ ತಿರುಗಿದ ಹಿನ್ನೆಲೆ ತವರು ಮನೆಯಲ್ಲಿದ್ದ ತಾಯಿಯನ್ನು ಫೋನ್ ಮಾಡಿ ಮಗಳು ಕರೆಸಿಕೊಂಡಿದ್ದಳು. ಈ ವೇಳೆ ಜಗಳ ಬಿಡಿಸಲು ಮುಂದಾದ ಮಹಿಳೆಯ ತಲೆಗೆ ಅಳಿಯ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಅಶ್ವಿತ್ ಉನ್ನಿಸಾಳನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ.
ಈ ಪ್ರಕರಣವು ಮದುಗಿರಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೆಟಿ ನೀಡಿ ಪರಿಶೀಲಿಸಿದ್ದಾರೆ.