Thursday, January 9, 2025

ಇದರಲ್ಲಿ ನಿಮ್ಮ ಬೈಕ್ ಇರಬಹುದು! : 16.65 ಲಕ್ಷದ ಬರೋಬ್ಬರಿ 37 ಬೈಕ್ ವಶ, ನಾಲ್ವರು ಅರೆಸ್ಟ್

ವಿಜಯಪುರ : ಹೀರೋ ಹಾಗೂ ಹೋಂಡಾ ಕಂಪನಿಯ ಬೈಕ್​ಗಳನ್ನೇ ಟಾರ್ಗೆಟ್ ಮಾಡಿ ದೋಚುತ್ತಿದ್ದ ನಾಲ್ವರು ಖತರ್ನಾಕ್ ಕಳ್ಳರನ್ನು ವಿಜಯಪುರ ಪೊಲೀಸರು ಲಾಕ್ ಮಾಡಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ನಾಲ್ಕು ಜನ ಬೈಕ್ ಕಳ್ಳರನ್ನು ಬಂಧಿಸಿ, ಲಕ್ಷಾಂತರ ಮೌಲ್ಯದ ಬೈಕ್‌ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸವರಾಜ ಹುಣಸಿಗಿಡದ, ಹುಲುಗಪ್ಪ ಕೂಕಲೋರ, ಕೊಂಡಯ್ಯ ಪಾರ್ವತಿದೊಡ್ಡಿ, ರವಿಕುಮಾರ ಪಾರ್ವತಿದೊಡ್ಡಿ ಬಂಧಿತ ಆರೋಪಿಗಳು.

ಎಸ್. ಪಿ. ಋಷಿಕೇಶ ಸೋನಾವಣೆ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಕಿಡಿಗೇಡಿಗಳು ಯಂಕಂಚಿ ಬೈಪಾಸ್ ಬಳಿ ಸಂಶಯಾಸ್ಪದವಾಗಿ ಎರಡು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ವಿಜಯಪುರ, ಕಲಬುರಗಿ ಸೇರಿದಂತೆ ವಿವಿಧ ಕಡೆಗೆ ಕಳ್ಳತನ ಮಾಡಿದ್ದ 16 ಲಕ್ಷದ 65 ಸಾವಿರ ಮೌಲ್ಯದ 37 ಬೈಕ್‌ಗಳನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆದಿದೆ.

6ಕ್ಕೂ ಹೆಚ್ಚು ಮನೆಗಳ್ಳತನ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನರಸಿಂಗಪುರ ಗ್ರಾಮದಲ್ಲಿ ರಾತ್ರಿ ಆರಕ್ಕೂ ಹೆಚ್ಚು ಮನೆಗಳ್ಳತನ ಮಾಡಿರುವ ಘಟನೆ ನಡೆದಿದೆ. ನರಸಿಂಗಪುರದ ಅಂಬೇಡ್ಕರ್ ಗಲ್ಲಿ ಹಾಗೂ ಪಾಟೀಲ ಗಲ್ಲಿಯಲ್ಲಿ ನಿನ್ನೆ ತಡರಾತ್ರಿ ನಸುಕಿನ ಸಮಯದಲ್ಲಿ ಕಳ್ಳತನ ನಡೆದಿದೆ.

ಯಾರೂ ಇಲ್ಲದ ಮನೆಗಳನ್ನೇ ಕಳ್ಳರು ಗುರುತಿಸಿ ಪ್ಲ್ಯಾನ್ ಮಾಡಿ ಕೃತ್ಯ ಎಸಗಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಹಣ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಘಟನೆಯಿಂದ ನರಸಿಂಗಪುರ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES