Tuesday, November 5, 2024

ವಿಶ್ವಕಪ್ ಕನಸು ಭಗ್ನ.. ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಸೋಲು, ಮತ್ತೆ ಆಸೀಸ್ ಚಾಂಪಿಯನ್

ಬೆಂಗಳೂರು : ‘ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ..’ ಎನ್ನುವಂತೆ ಹಿರಿಯರ ಬಳಿಕ ಇದೀಗ ಕಿರಿಯರು ಸಹ ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಛಿದ್ರ ಛಿದ್ರ ಮಾಡಿದ್ದಾರೆ.

ಐಸಿಸಿ ಅಂಡರ್-19 ವಿಶ್ವಕಪ್ ಕ್ರಿಕೆಟ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಭಾರತ 79 ರನ್​ಗಳಿಂದ ಸೋಲು ಅನುಭವಿಸಿದೆ. ಈ ಮೂಲಕ ಭಾರತ ರನ್ನರ್ ಅಪ್​ಗೆ ತೃಪ್ತಿಪಟ್ಟುಕೊಂಡಿದೆ.

WTC 23 ಮತ್ತು CWC 23 ನಂತರ, ಆಸ್ಟ್ರೇಲಿಯಾ U19 ವಿಶ್ವಕಪ್ 2024 ನೊಂದಿಗೆ ಹ್ಯಾಟ್ರಿಕ್ ಪೂರ್ಣಗೊಳಿಸಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಸಚಿನ್, ಅರ್ಶಿನ್, ಉದಯ್ ನಿರಾಸೆ

ಆಸ್ಟ್ರೇಲಿಯಾ ನೀಡಿದ್ದ 254 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನತ್ತಿದ ಭಾರತ 43.5 ಓವರ್​ಗಳಲ್ಲಿ 174 ರನ್​ಗಳಿಗೆ ಆಲೌಟ್​ ಆಯಿತು. ಇ್ನನಿಂಗ್ಸ್​ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಿಸಿತು. ಅರ್ಶಿನ್ ಕುಲಕರ್ಣಿ ಕೇವಲ 3 ರನ್​ಗೆ ಔಟಾದರು. ನಾಯಕ ಉದಯ್ ಸಹರನ್ 8, ಸಚಿನ್ ದಾಸ್ ಹಾಗೂ ಪ್ರಿಯಾಂಶು ಮೊಲಿಯಾ 9 ರನ್​ಗೆ ಔಟಾಗಿ ನಿರಾಸೆ ಮೂಡಿಸಿದರು. ಅರವೆಲ್ಲಿ ಅವನೀಶ್ ಹಾಗೂ ರಾಜ್​ ಲಿಂಬಾನಿ ಸೊನ್ನೆ (0) ಸುತ್ತಿ ಬಂದ ಹಾದಿಯಲ್ಲೇ ಹಿಂದಿರುಗಿದರು.

ಆದರ್ಶ್​ ಸಿಂಗ್ 47, ಮುರುಗನ್ ಅಭಿಷೇಕ್ 42

ಆರಂಭಿಕ ಆಟಗಾರ ಆದರ್ಶ್​ ಸಿಂಗ್ 47, ಮುರುಗನ್ ಅಭಿಷೇಕ್ 42, ಮುಶೀರ್ ಖಾನ್ 22, ರನ್​ ಗಳಿಸಿದ್ದೇ ಭಾರತದ ಪರ ಅತ್ಯಧಿಕ ಸ್ಕೋರ್. ಉಳಿದ ಯಾವೊಬ್ಬ ಬ್ಯಾಟರ್​ ಸಹ ಆಸಿಸ್​ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಲಿಲ್ಲ. ಆಸ್ಟ್ರೇಲಿಯಾ ಪರ ಬಿಯರ್ಡ್ಮನ್ ಹಾಗೂ ಮ್ಯಾಕ್​ಮಿಲನ್ ತಲಾ 3, ವಿಡ್ಲರ್ 2 ಹಾಗೂ ಆಂಡರ್ಸನ್ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES