ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಪ್ರಾದೇಶಿಕ ವಲಯದ ಅರಣ್ಯ ಪ್ರವೇಶಿಸುತ್ತಿದ್ದ ಆರೋಪದಡಿ ವ್ಯಕ್ತಿಯೋರ್ವನನ್ನು ಬಂಧಿಸಿದ್ದು ನ್ಯಾಮತಿ ಶಾಖೆಯಲ್ಲಿ 63 ಜೀವಂತ ನಾಡ ಬಾಂಬ್ ಜಪ್ತಿಮಾಡಿರುವ ಘಟನೆ ನಡೆದಿದೆ.
ನ್ಯಾಮತಿ ತಾಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮದ ಬಸವರಾಜಪ್ಪ ಬಂಧಿತ ಆರೋಪಿ. ಕಾಡು ಪ್ರಾಣಿ ಬೇಟೆಯಾಡಲು ಕಾಡಿಗೆ ಅಕ್ರಮ ಪ್ರವೇಶ ಮಾಡಿದ್ದ ಇಬ್ಬರ ಪೈಕಿ ಓರ್ವನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಕಾಡು ಪ್ರಾಣಿಗಳನ್ನು ಸ್ಫೋಟಕ, ಮದ್ದು ಗುಂಡು ಬಳಸಿ ಬೇಟೆಯಾಡ್ತಿದ್ದರು. ಈ ವೇಳೆ ಅರಣ್ಯ ಸಿಬ್ಬಂದಿ ಕಂಡು ಖದೀಮರು ಪರಾರಿಯಾಗಿದ್ದಾರೆ.
ಇದನ್ನೂ ಓದಿ: OTT ಯಲ್ಲಿ ‘ಕಾಟೇರ’ ದರ್ಶನ!: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮ
ಆರೋಪಿಯಿಂದ 63 ಜೀವಂತ ನಾಡ ಬಾಂಬ್, ಒಂದು ಬೈಕ್ನ್ನು ಪೊಲೀಸರು ವಶಕ್ಕೆ ಪಡೆದು, ಬಾಂಬ್ ನಿಷ್ಕ್ರಿಯಕ್ಕಾಗಿ ಚಿತ್ರದುರ್ಗ ತಾಲೂಕಿನ ಡಿ.ಎಸ್ ಹಳ್ಳಿಯ ಸ್ಫೋಟಕ ವಸ್ತು ಸಂಗ್ರಹಾಲಯಕ್ಕೆ ರವಾನಿಸಿದ್ದಾರೆ.