ರಾಯಚೂರು : ರಾಯಚೂರು ಎಸಿ ಕಚೇರಿ ಸಿಬ್ಬಂದಿ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಮೇಲಾಧಿಕಾರಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ವಾಸಿಂ ಚೌದರಿ ಆತ್ಮಹತ್ಯೆಗೆ ಯತ್ನಿಸಿದ್ದ ಸಿಬ್ಬಂದಿಯಾಗಿದ್ದು, ರಾಯಚೂರು ಸಂಕಲ್ಪ ಆಸ್ಪತ್ರೆಯಲ್ಲಿ ಪ್ರಾಥಮಿಕವಾಗಿ ಚಿಕಿತ್ಸೆ ನೀಡಲಾಗಿತ್ತು.
ವಾಸಿಂ ಲ್ಯಾಂಡ್ ರೆಕಾರ್ಡ್ ಕಿಪರ್ ಹುದ್ದೆಯಲ್ಲಿ ಡಿ ದರ್ಜೆ ಸಿಬ್ಬಂದಿಯಾಗಿದ್ದ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿದ್ದ ಬಾಲಕ ಇದ್ದಕ್ಕಿದ್ದಂತೆ ನಾಪತ್ತೆ
ಮನೆಯಲ್ಲಿದ್ದ ಬಾಲಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ. ನಿರಂತರ ಹುಡುಕಾಟ ನಡೆಸಿದ್ರು ಬಾಲಕ ಇನ್ನು ಪತ್ತೆಯಾಗಿಲ್ಲ. ಜನವರಿ 24ರ ಸಂಜೆ 6.30ಕ್ಕೆ ಬಾಲಕ ಕಾಣೆಯಾಗಿದ್ದಾನೆ.
ಪೋಷಕರು ಮಗನನ್ನು ನೆನೆದು ಕಣ್ಣೀರು ಹಾಕ್ತಿದ್ದಾರೆ. ಗಾರೆ ಕೆಲಸ ಮಾಡಿಕೊಂಡಿರೊ ತಾರಮ್ಮ ಹಾಗೂ ಭೀಮಪ್ಪ ದಂಪತಿ ಪುತ್ರನಾಗಿದ್ದು, ರಾಮಮೂರ್ತಿನಗರದ ಮನೆಯಿಂದ ಬಾಲಕ ಕಾಣೆಯಾಗಿದ್ದಾನೆ. ಈ ಘಟನೆ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.