ದಕ್ಷಿಣಕನ್ನಡ: ಬಸ್ಸಿನಿಂದ ಆಯತಪ್ಪಿ ವೃದ್ಧೆ ಬಿದ್ದ ಸಾವನ್ನಪ್ಪಿರುವ ಘಟನೆ ದ.ಕ ಜಿಲ್ಲೆಯ ಉಪ್ಪಿನಂಗಡಿ ಬಳಿ ಮಾಣಿ ಎಂಬಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಚಲಿಸುತ್ತಿದ್ದ ಖಾಸಗಿ ಬಸ್ಸಿನಿಂದ ವೃದ್ಧೆ ಕೆಳಗೆ ಬಿದ್ದಿದ್ದಾರೆ. ಜ.31ರಂದು ಈ ಘಟನೆ ನಡೆದಿದ್ದು, ಬಸ್ಸಿನ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಉಪ್ಪಿನಂಗಡಿ ನಿನ್ನಿಕಲ್ಲು ನಿವಾಸಿ ರಾಧಾ ಮೃತ ದುರ್ದೈವಿ. ಬಸ್ ಚಾಲಕ, ನಿರ್ವಾಹಕನ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 40% ಭ್ರಷ್ಟಾಚಾರ : ಕಾಂಗ್ರೆಸ್, ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು-ಎಎಪಿ
ಮಗು ಹಿಡಿದು ಬಂದ ಮಹಿಳೆಗೆ ವೃದ್ಧೆ ಸೀಟು ಬಿಟ್ಟುಕೊಟ್ಟಿದ್ದಾರೆ. ಮುಸ್ಲಿಂ ಮಹಿಳೆಗೆ ಸೀಟು ಕೊಡಲು ಎದ್ದು ನಿಂತಿದ್ದಾಗಲೇ ಆಯತಪ್ಪಿ ಹೊರಕ್ಕೆ ಬಿದ್ದಿದ್ದಾರೆ. ಗಂಭೀರ ಸ್ಥಿತಿಯಲ್ಲಿ ವೃದ್ಧೆಯನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಾಲ್ಕು ದಿನಗಳ ಬಳಿಕ ಮೃತಪಟ್ಟಿದ್ದಾರೆ.