Monday, December 23, 2024

ಬಿಜೆಪಿಯವ್ರು ನಮ್ಗೆ ಕೋಳಿ, ಮರಿ ಮಾಂಸ, ಲಿವರ್ ಫ್ರೈ ಬಡಿಸಿದ್ರಾ..? : ಮಹದೇವಪ್ಪ ಗರಂ

ಮೈಸೂರು : ಕಾಂಗ್ರೆಸ್ ನಾಯಕರು ಮಾಂಸ ತಿಂದು ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ ಎಂಬ ಬಿಜೆಪಿಗರ ಆರೋಪಕ್ಕೆ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಫುಲ್ ಗರಂ‌ ಆಗಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯವರು ನಮಗೆ ಊಟ ಬಡಿಸಿದ್ರಾ..? ಮಾಂಸ ಸಾರು ಬಡಿಸಿದ್ರಾ..? ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿಜೆಪಿಯವರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಬೇಕು. ಅದು ಬಿಟ್ಟು ಈ ರೀತಿ ಬೇಜವಾಬ್ದಾರಿಯುತ ಹೇಳಿಕೆ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯವರಿಗೆ ಜನರ ಮೂಲಭೂತ ಹಕ್ಕುಗಳ ಅರಿವಿಲ್ಲ. ಸಂವಿಧಾನದ ಆಶಯ ಗೊತ್ತಿಲ್ಲದವರು ಈ ರೀತಿ ಮಾತನಾಡುತ್ತಿದ್ದಾರೆ. ನಮಗೆ ಬಿಜೆಪಿಯವರೇನು ಕೋಳಿ ಕೊಯ್ದು ಬಡಿಸಿದ್ರಾ..? ಮರಿ ಮಾಂಸ ತಂದಿದ್ರಾ..? ಲಿವರ್ ಫ್ರೈ ಮಾಡಿ ಕೊಟ್ಟಿದ್ರಾ..? ಎಂದು ಸಚಿವ ಮಹದೇವಪ್ಪ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

RELATED ARTICLES

Related Articles

TRENDING ARTICLES