Wednesday, January 22, 2025

ಅನಂತ ಕುಮಾರ್ ಹೆಗಡೆನ ಯಾಕೆ ಗುಂಡಿಕ್ಕಿ ಕೊಲ್ಲಲಿಲ್ಲ..? : ಚಲುವರಾಯಸ್ವಾಮಿ

ಬೆಂಗಳೂರು : ಸಂಸದ ಡಿ.ಕೆ. ಸುರೇಶ್ ಹಾಗೂ ವಿನಯ್ ಕುಲಕರ್ಣಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಈಶ್ವರಪ್ಪ ಹೇಳಿಕೆಗೆ ಕೃಷಿ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎಂತದ್ದೋ ಎಂಪಿ ಇದ್ರಲ್ಲ.. ಅನಂತ ಕುಮಾರ್ ಹೆಗಡೆ ಅಂತ.. ಅವರನ್ನು ಯಾಕೆ ಇವರು ಕೊಲ್ಲಲಿಲ್ವಂತೆ..? ಎಂದು ವಾಗ್ದಾಳಿ ನಡೆಸಿದ್ದಾರೆ.

ಕೆ.ಎಸ್. ಈಶ್ವರಪ್ಪ ಎಂಥಾ ಸೀನಿಯರ್..? ಅವರೇ ಎಷ್ಟೆಲ್ಲಾ ಲಘುವಾಗಿ ಮಾತನಾಡಿದ್ದಾರೆ. ಸಂಸದ ಡಿ.ಕೆ. ಸುರೇಶ್ ಏನು ತಪ್ಪು ಮಾಡಿದ್ದಾರೆ..? ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದು ಸತ್ಯ ಅಲ್ವಾ..? ಇದನ್ನು ಪ್ರಶ್ನೆ ಮಾಡುವುದು ತಪ್ಪಾ..? ಎಂದು ಪ್ರಶ್ನೆ ಮಾಡಿದ್ದಾರೆ.

ಮೋದಿ ಮುಂದೆ ಕೈಕಟ್ಟಿ ನಿಂತ್ಕೊಂಡ್ರೆ

ಪ್ರಧಾನಿ ನರೇಂದ್ರ ಮೋದಿಯವರು ಸಿಎಂ ಆಗಿದ್ದಾಗ ಏನು ಬೇಕಾದರೂ ಮಾತನಾಡಬಹುದು. ನಾವು ಮಾತ್ರ ಕರ್ನಾಟಕದವರು ಈಗ ಕೈ ಕಟ್ಟಿಕೊಂಡು ನಿಲ್ಲಬೇಕಾ..? ನಮ್ಮ ಹಕ್ಕನ್ನು, ನಮ್ಮ ಜನರ ಸಮಸ್ಯೆಯನ್ನು ನಾವು ಹೇಳಿದ್ದೇವೆ. 26 ಜನ ಸಂಸದರನ್ನು ಗೆಲ್ಲಿಸಿದ್ದಾರೆ. ಅವರು ಕರ್ನಾಟಕದ ಸಮಸ್ಯೆಯನ್ನೇ ಮಾತನಾಡದೇ, ಮೋದಿ ಮುಂದೆ ಕೈಕಟ್ಟಿ ನಿಂತ್ಕೊಂಡ್ರೆ.. ಅಂಥ ಸಂಸದರಿಗೆ ನಾವು ಏನು ಹೇಳಬೇಕು..? ಎಂದು ಹರಿಹಾಯ್ದಿದ್ದಾರೆ.

ಕುವೆಂಪು ಹೆಚ್ಚು ಪ್ರೀತಿಸಿದ ಜಿಲ್ಲೆ ಮಂಡ್ಯ

ಮಂಡ್ಯ ಬಂದ್ ವಿಚಾರ ಕುರಿತು ಮಾತನಾಡಿ, ಕುವೆಂಪು ಅವರು ಅತ್ಯಂತ ಹೆಚ್ಚು ಪ್ರೀತಿಸಿದ ಜಿಲ್ಲೆ ಮಂಡ್ಯ. ಕುವೆಂಪು ಅವರ ಮಾತಿಗೆ ವಿರುದ್ಧವಾಗಿ ಇವತ್ತು ಬಂದ್ ಮಾಡಲಾಗಿದೆ. ಇಲ್ಲಿಯವರೆಗೆ ಯಾವುದೇ ಜಾತಿಗಳ ನಡುವೆ, ಧರ್ಮಗಳ ನಡುವೆ ಘರ್ಷಣೆ ಆಗುವ ಅವಕಾಶ ಮಂಡ್ಯದಲ್ಲಿ ಇರಲಿಲ್ಲ. ಮುಂದೆಯೂ ಆಗುವುದಕ್ಕೆ ಅವಕಾಶ ಇಲ್ಲ. ಜನರು ಕೂಡ ಯಾವುದೇ ತರದ ಪ್ರಚೋದನೆಗೆ ಒಳಗಾಗುವುದಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES