Sunday, January 12, 2025

ನಾನು ಯಾವತ್ತು ಸಿಗರೇಟ್ ಸೇದಿಲ್ಲ : ಡಾ.ಜಿ. ಪರಮೇಶ್ವರ್

ಬೆಂಗಳೂರು : ನಾನು ಕಾಲೇಜಿನಲ್ಲಿ ಇದ್ದಾಗ ಅನೇಕ ಮಂದಿ ಸಿಗರೇಟ್​ನಲ್ಲಿ ಗಾಂಜಾ ಸೇದುತ್ತಿದ್ದರು. ನಾನು ಸ್ವತಃ ಅದನ್ನು ನೋಡಿದ್ದೇನೆ, ನಾನು ಯಾವತ್ತು ಸಿಗರೇಟ್ ಸೇದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಡ್ರಗ್ ಅನೇಕ ಜನರ ಜೀವ ತೆಗೆದಿದೆ. ಆಫ್ರಿಕಾ ಪ್ರಜೆಗಳು ಇಲ್ಲಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದಾರೆ. ಅನೇಕ ಅಧಿಕಾರಿಗಳು ಶ್ರೇಷ್ಠ ಕೆಲಸ ಮಾಡಿದ್ದಾರೆ. ಅಧಿಕಾರಿಗಳಿಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ನಾನು ಮೂರನೇ ಬಾರಿ ರಾಜ್ಯದ ಗೃಹ ಸಚಿವನಾಗಿದ್ದೇನೆ. ವಿಧಾನಸಭೆ, ವಿಧಾನಪರಿಷತ್​ನಲ್ಲಿ ಅತೀ ಹೆಚ್ಚು ಪ್ರಶ್ನೆಗಳು ಡ್ರಗ್ಸ್ ಬಗ್ಗೆ ಬಂದಿದೆ. ಮಾದಕ ವಸ್ತುಗಳು ಇಡೀ ಸಮುದಾಯವನ್ನು ನಾಶಪಡಿಸುವ ಕೆಲಸ ಮಾಡುತ್ತವೆ. ಯುವ ಸಮುದಾಯದ ಆರೋಗ್ಯ ಜೀವನ ಹಾಳಾಗುತ್ತಿದೆ. ನಮಗೆ ಡ್ರಗ್ ಬಹಳ ದೊಡ್ಡ ಸವಾಲಾಗಿ ನಿಂತಿದೆ. ಕೆಲ ದೇಶಗಳು ಡ್ರಗ್ ವಿರುದ್ಧ ಸೋತುಬಿಟ್ಟಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಇಲಾಖೆ ನೆನಪಾಗಿ ಉಳಿಯಬೇಕು

ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಸುವರ್ಣ ಸಂಭ್ರಮ ಆಚರಣೆ ನಡೆಸುತ್ತಿದೆ. ಸಂಕಲ್ಪ ಮಾಡಿದಂತೆ ಪೊಲೀಸ್ ಇಲಾಖೆಯ ಜನಸಮುದಾಯದಲ್ಲಿ ನೆನಪಾಗಿ ಉಳಿಯಬೇಕು. ಇಡೀ ರಾಜ್ಯವನ್ನು ಡ್ರಗ್ ಮುಕ್ತ ಮಾಡಲು ಯೋಜಿಸಲಾಗಿತ್ತು. ಡ್ರಗ್ ದೊಡ್ಡ ಆಂದೋಲನ, ಯುದ್ಧವನ್ನ ಮಾಡಬೇಕು ಎಂದುಕೊಂಡಿದ್ದೆವು. ಹೀಗಾಗಿ, ಪೊಲೀಸರು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES