ದಾವಣಗೆರೆ : ನಾನು ಹೇಳಿದ್ದು ಸುಳ್ಳಾದ್ರೆ ರಾಜಕೀಯ ಬಿಟ್ಟು ಬಿಡ್ತಿನಿ ಎಂದು ಬಿಜೆಪಿಗರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.
ಕೇಂದ್ರ ಸರ್ಕಾರದ ತೆರಿಗೆ ವಿಚಾರವಾಗಿ ದಾವಣಗೆರೆ ಜಿಲ್ಲೆ ರಾಜನಹಳ್ಳಿಯಲ್ಲಿ ಮಾತನಾಡಿದ ಅವರು, ತೆರಿಗೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರೋದು ಸತ್ಯ.. ಸತ್ಯ.. ಎಂದು ಹೇಳಿದ್ದಾರೆ.
ಈವರೆಗೂ ಕೆಂದ್ರ ಸರ್ಕಾರದಿಂದ ಒಂದು ರೂಪಾಯಿ ಕೂಡ ಬಿಡುಗಡೆ ಮಾಡಿಲ್ಲ. ರಾಜ್ಯದ ಮರ್ಯಾದೆ ತೆಗೆದಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಹೇಳಿದ್ದಕ್ಕೆಲ್ಲ ಯಡಿಯೂರಪ್ಪ ತಲೆ ಅಲ್ಲಾಡಿಸಿದಂತೆ ನಾನು ತಲೆ ಅಲ್ಲಾಡಿಸಬೇಕಾ..? ಎಂದು ತಲೆ ಅಲ್ಲಾಡಿಸಿ ಅಣಕಿಸಿದ್ದಾರೆ.
ನಾವು ಬಾಯಿ ಮುಚ್ಚಿಕೊಂಡು ಇರ್ಬೇಕಾ?
ರಾಜ್ಯ ಬಿಜೆಪಿ ಲೀಡರ್ಗಳು ಅಮಿತ್ ಶಾ ಜೊತೆ ಮಾತನಾಡಿ ಅನುದಾನ ಬಿಡುಗಡೆ ಮಾಡಿಲ್ಲ. ಯಡಿಯೂರಪ್ಪ, ಅಶೋಕ್, ಬಸವರಾಜ ಬೊಮ್ಮಯಿ, ವಿಜಯೇಂದ್ರ ಹೋಗಿ ಕೇಳಲಿ. ನಮಗೆ ಅನ್ಯಾಯ ಆದ್ರೆ ಪ್ರತಿಭಟಿಸಬಾರದಾ? ನೀವೆ ಹೇಳಿ. ಯಡಿಯೂರಪ್ಪ ಬಾಯಿ ಮುಚ್ಚಿಕೊಂಡು ಇದಾರೆ ಎಂದರೆ ನಾವು ಹಾಗೆಯೇ ಇರಬೇಕಾ..? ಎಂದು ಕಿಡಿಕಾರಿದ್ದಾರೆ.
100 ರೂ. ಕೊಟ್ರೆ 12 ರೂ. ಕೊಟ್ಟಿದ್ದಾರೆ
ರಾಜ್ಯದಿಂದ ನೂರು ರೂಪಾಯಿ ತೆರಿಗೆ ನೀಡಿದ್ರೆ ನಮಗೆ ಬರೋದು 12 ರೂಪಾಯಿ ಮಾತ್ರ. ತೆರಿಗೆ ಕೊಡೋದರಲ್ಲಿ ನಾವು 2ನೇ ಸ್ಥಾನದಲ್ಲಿದ್ದೇವೆ. ಆದರೂ ನಮಗೆ ಕೊಡಬೇಕಾದ ಅನುದಾನ ಸಿಗುತ್ತಿಲ್ಲ. ಬರವನ್ನು ನಾವು ಸರಿಯಾಗಿ ನಿರ್ವಹಣೆ ಮಾಡ್ತಾ ಇದೀವಿ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆ ಯಾಗಬಾರದು. ಮೇವು, ಉದ್ಯೋಗ ಕೊಡ್ತಾ ಇದೀವಿ, 850 ಕೋಟಿ ನಿಧಿ ಇಡಲಾಗಿದೆ. ಯಾರು ಕೂಡ ಗುಳೆ ಹೋಗದ ರೀತಿ ನೋಡಿಕೊಳ್ಳಲು ಡಿಸಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.