ದಾವಣಗೆರೆ : ನಿಮ್ಮ ಮೇಲಿನ ಎಲ್ಲಾ ಕೇಸ್ ವಾಪಾಸ್ ಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, SC, ST ಹಾಗೂ ಬ್ಯಾಕ್ ಲಾಗ್ ಹುದ್ದೆಗಳನ್ನೂ ತುಂಬುತ್ತೇವೆ ಎಂದು ಹೇಳಿದರು.
ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿಗೆ ನಾಗಮೋಹನ್ ದಾಸ್ ಆಯೋಗಕ್ಕೆ ಒತ್ತಾಯ ಮಾಡಿದ್ದೆವು. 7% ಮೀಸಲಾತಿ ಸಿಕ್ಕಿದ್ದರೆ ವಾಲ್ಮೀಕಿ ಶ್ರೀ ಕಾರಣ. 257 ದಿನ ಧರಣಿ ಕೂರದೇ ಇದ್ದಿದ್ದರೆ ಸರ್ಕಾರ ಬಗ್ತಾ ಇರಲಿಲ್ಲ. ವಿರೋಧ ಪಕ್ಷದಲ್ಲಿದ್ದಾಗ ನಾನು ಪೂರ್ಣ ಬೆಂಬಲ ಸೂಚಿಸಿದ್ದೆ. ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಶಿಕ್ಷಣ ಸಿಗಬೇಕು ಎಂದು ತಿಳಿಸಿದರು.
ಮೀಸಲಾತಿ ಭಿಕ್ಷೆಯಲ್ಲ, ಅದು ನಿಮ್ಮ ಹಕ್ಕು
ಮೀಸಲಾತಿ ಭಿಕ್ಷೆಯಲ್ಲ, ಅದು ನಿಮ್ಮ ಹಕ್ಕು. 2013ರಲ್ಲೇ ಸಂಬಳ, ಸಾಲ ಬಿಟ್ಟು SC, STಗೆ ಅಭಿವೃದ್ದಿಗೆ ಕಾನೂನು ಮಾಡಿದ್ದು ನಾನು. ಬಹಳ ಭಾಷಣ ಹೊಡಿತಾರಲ್ಲ, ಯಾರು ಮಾಡಿಲ್ಲ. ಕೇಂದ್ರದಲ್ಲಿ ಈ ಕಾನೂನು ಯಾಕೆ ಮಾಡಿಲ್ಲ. ಇಡೀ ದೇಶದಲ್ಲಿ ವಾಲ್ಮೀಕಿ ಜನಾಂಗ ಇದ್ದಾರೆ, ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ಹಣ ಮೀಸಲಿಡಲಿ. ಈ ಕಾನೂನು ತರಲು ಇಡೀ ದೇಶದಲ್ಲಿ ಒತ್ತಾಯ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.