Wednesday, January 22, 2025

ಚಿಕ್ಕಮಗಳೂರಲ್ಲಿ ಮತ್ತೆ ಲವ್ ಜಿಹಾದ್ : ಅಪ್ರಾಪ್ತ ಬಾಲಕಿ ಜೊತೆ ಸುತ್ತಾಡುತ್ತಿದ್ದವನಿಗೆ ಬಿತ್ತು ಗೂಸ

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮತ್ತೆ ಲವ್ ಜಿಹಾದ್ ಸದ್ದು ಮಾಡುತ್ತಿದೆ. ಅಪ್ರಾಪ್ತ ಬಾಲಕಿಯ ಜೊತೆ ಸುತ್ತಾಡುತ್ತಿದ್ದ ಮುಸ್ಲಿಂ ಯುವಕನ ಮೇಲೆ ಭಜರಂಗದಳ ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ.

ಡ್ಯಾನ್ಸ್ ಮಾಸ್ಟರ್ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿ ಬಂದಿದ್ದು, ಭಜರಂಗದಳ ಕಾರ್ಯಕರ್ತರು ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಲ್ದೂರು ಪೊಲೀಸರು VHP ಜಿಲ್ಲಾ ಸಂಚಾಲಕ ಸೇರಿ ಏಳು ಹಿಂದೂ ಕಾರ್ಯಕರ್ತರು ಬಂಧಿಸಿದ್ದು, ಯುವತಿಯ ಪೋಷಕರು ಮುಸ್ಲಿಂ ಯುವಕನ ವಿರುದ್ಧ ದೂರು ನೀಡಿದ್ದಾರೆ. ಅಪ್ರಾಪ್ತ ಯುವತಿ ಅಪಹರಣದ ಯತ್ನ ಮತ್ತು ಪ್ರೀತಿ ವಂಚನೆ ಆರೋಪದಡಿ ದೂರು ನೀಡಿದ್ದಾರೆ.

ಈ ಸುದ್ದಿ ಓದಿದ್ದಿರಾ? : 2ನೇ ತರಗತಿ ವಿದ್ಯಾರ್ಥಿನಿ ಕಿಡ್ನಾಪ್​ಗೆ ಯತ್ನ : ಖದೀಮನ ಕೈ ಕಚ್ಚಿ ತಪ್ಪಿಸಿಕೊಂಡ ಬಾಲಕಿ

ಈ ಘಟನೆ ಸಂಬಂಧ ಎರಡು ಕಡೆಯಿಂದಲೂ ದೂರು ಪ್ರತಿ ದೂರು ದಾಖಲಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಕ್ರಮವಾಗಿ ಪಟ್ಟಣದಲ್ಲಿ KSRP ತುಕಡಿ ನಿಯೋಜನೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES