Monday, December 23, 2024

ಜಡೇಜಾ ಕ್ರಿಕೆಟ್​ಗೆ ಕಾಲಿಟ್ಟು 15 ವರ್ಷ : ಚೊಚ್ಚಲ ಪಂದ್ಯದಲ್ಲೇ ಆರ್ಭಟ, ಜಡ್ಡು ಆರಂಭ ಹೇಗಿತ್ತು?

ಬೆಂಗಳೂರು : ಫೆಬ್ರವರಿ 8, 2009. ಇದೇ ದಿನ ಚಿಗುರು ಮೀಸಿ ಹುಡುನೊಬ್ಬ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ. ಈತ ಸ್ಪಿನ್ನರ್ ಆಗಿದ್ದರೂ ಮೊದಲ ಪಂದ್ಯದಲ್ಲೇ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ್ದ. ಈತ ಬೇರೆ ಯಾರೂ ಅಲ್ಲ, ಸರ್ ರವೀಂದ್ರ ಜಡೇಜಾ!

ಹೌದು, ಭಾರತದ ಸ್ಟಾರ್ ಆಲ್​ರೌಂಡರ್ ಸರ್ ರವೀಂದ್ರ ಜಡೇಜಾ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟು ಇಂದಿಗೆ ಬರೋಬ್ಬರಿ 15 ವರ್ಷ ತುಂಬಿದೆ. ಫೆ.8, 2009ರಂದು ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಜಡೇಜಾ ತಮ್ಮ ಚೊಚ್ಚಲ ಪಂದ್ಯ ಆಡಿದ್ದರು.

ತಮ್ಮ ಮೊದಲ ಪಂದ್ಯದಲ್ಲಿ ಜಡ್ಡು ಭಾಯ್ 60 ರನ್​ ಸಿಡಿಸಿದ್ದರು. ಆದರೆ, ಆ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು. ಆ ದಿನ ಜಡೇಜಾಗೆ ಸ್ಮರಣೀಯ ದಿನವಾಗಿತ್ತು. ಅಂದಿನಿಂದ ಇಂದಿನವರೆಗೆ ಭಾರತಕ್ಕೆ ಏಕಾಂಗಿಯಾಗಿ ಸಾಕಷ್ಟು ಪಂದ್ಯಗಳನ್ನು ಜಡೇಜಾ ಗೆಲ್ಲಿಸಿಕೊಟ್ಟಿದ್ದಾರೆ.

ಸಾಕಷ್ಟು ಏರಿಳಿತಗಳನ್ನು ಕಂಡಿರುವ ಜಡೇಜಾ ಪ್ರಸ್ತುತ ಭಾರತ ಸ್ಪಿನ್ ಆಲ್‌ರೌಂಡರ್ ವಿಭಾಗದ ಜೀವಾಳವಾಗಿದ್ದಾರೆ. 2009 ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಜಡೇಜಾ ಅದೇ ವರ್ಷ ಟಿ-20ಯಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದರು. ಒಂದೆರಡು ವರ್ಷಗಳ ನಂತರ, ಜಡೇಜಾ ಇಂಗ್ಲೆಂಡ್ ವಿರುದ್ಧ ನಾಗ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದ ಮೂಲಕ ಪಾದಾರ್ಪಣೆ ಮಾಡಿದರು.

5 ವರ್ಷಗಳ ನನ್ನ ಕನಸನ್ನು ನನಸಾಗಿಸಿದೆ

ಇದೀಗ ಜಡೇಜಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂತಸವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಭಾರತ ತಂಡದಲ್ಲಿ ಆಡಿರುವ ಕೆಲವು ಹಳೆಯ ಚಿತ್ರಗಳ ವೀಡಿಯೊವನ್ನು ಹಂಚಿಕೊಂಡಿರುವ ಜಡೇಜಾ, ‘5 ವರ್ಷಗಳ ನನ್ನ ಕನಸನ್ನು ನನಸಾಗಿಸಿದೆ. ಪ್ರತಿ ಕ್ಷಣಕ್ಕೂ ಕೃತಜ್ಞನಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

332 ಪಂದ್ಯ, 6,129 ರನ್, 553 ವಿಕೆಟ್

ಪ್ರಸ್ತುತ ಎಲ್ಲಾ ಮಾದರಿಗಳಲ್ಲಿ 332 ಪಂದ್ಯಗಳನ್ನು ಆಡಿರುವ ಜಡೇಜಾ, 6,129 ರನ್​ ಗಳಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 33 ಅರ್ಧಶತಕ ಸೇರಿವೆ. ಬೌಲಿಂಗ್​ನಲ್ಲೂ ಕಮಾಲ್ ಮಾಡಿರುವ ಜಡ್ಡು, 553 ವಿಕೆಟ್ ಕಬಳಿಸಿದ್ದಾರೆ. ಐಪಿಎಲ್​ನಲ್ಲಿ ಚೈನ್ನೈ ತಂಡವನ್ನು ಪ್ರತಿನಿಧಿಸುತ್ತಿರುವ ಜಡೇಜಾ ಕಳೆದ ಬಾರಿ ಚೈನ್ನೈ ಟ್ರೋಫಿ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

RELATED ARTICLES

Related Articles

TRENDING ARTICLES