ಬೆಂಗಳೂರು : ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಒಂದು ನಾಲಗೆ, ಪ್ರಧಾನಿ ಆಗಿದ್ದಾಗ ಮತ್ತೊಂದು ನಾಲಗೆನಾ..? ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರಧಾನಿ ಮೋದಿ ನಿನ್ನೆ ರಾಜ್ಯಸಭೆಯಲ್ಲಿ ಮಾತನಾಡಿದ್ದಾರೆ. ಹಿಂದೆ ಇದೇ ಮೋದಿಯವರು ಗುಜರಾತ್ ಬೆಗ್ಗರ್ಸ್ ರಾಜ್ಯನಾ ಅಂತ ಟ್ವೀಟ್ ಮಾಡಿದ್ದರು ಎಂದು ಚಾಟಿ ಬೀಸಿದರು.
ಬಿಜೆಪಿ ಅವ್ರು ಕರ್ನಾಟಕಕ್ಕೆ ಅನ್ಯಾಯವಾಗಿದೆ ಅಂದ್ರೆ ಒಪ್ಪಿಕೊಳ್ತಾರಾ..? ನಷ್ಟವನ್ನು ಸರಿ ಅನ್ನಲ್ಲ ಅವ್ರು. ನರೇಂದ್ರ ಮೋದಿ ಅವ್ರು ಭಾಷಣ ಮಾಡಿದ್ದಾರೆ. ದೇಶ ವಿಭಜನೆ ಮಾಡಲು ಈ ರೀತಿ ಮಾಡ್ತಿದ್ದಾರೆ ಎಂದಿದ್ದಾರೆ. ಗುಜರಾತ್ ಸಿಎಂ ಆಗಿದ್ದಾಗ ಮೋದಿ ಏನ್ ಹೇಳಿದ್ರು ಗೊತ್ತಾ..? ಎಂದು ಗುಡುಗಿದರು.
ಅದಕ್ಕೆ ನಾನು ಕೋಲೆ ಬಸವ ಅಂದಿದ್ದು
ತೆರಿಗೆಯೇ ಒಂದು ವರ್ಷ ಸಂಗ್ರಹ ಮಾಡಬೇಡಿ ಅಂತ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಹೇಳಿದ್ದರು. ಅವರು ಹಿಂದೆ ದೇಶ ವಿಭಜನೆ ಮಾಡುವುದಕ್ಕೆ ಹೊರಟಿದ್ದರಾ..? ರಾಜ್ಯದ ಹಿತಾಸಕ್ತಿ ಕಾಪಾಡಲು ಇದ್ದೇವೆ ನಾವು. 4.30 ಲಕ್ಷ ಕೋಟಿ ತೆರಿಗೆ ಸಂಗ್ರಹ ಮಾಡುತ್ತದೆ ಕೇಂದ್ರ. ನಮ್ಮ ಸಂಸದರು ರಾಜ್ಯದ ಹಿತ ಕಾಪಾಡುವಲ್ಲಿ ಫೇಲ್ ಆಗಿದ್ದಾರೆ. ಅದಕ್ಕೆ ನಾನು ಅವರನ್ನು ಕೋಲೆ ಬಸವ ಅಂತ ಹೇಳಿದ್ದು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.