ಬೆಂಗಳೂರು: ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್, ಅಭಿಮಾನಿಗಳ ಪಾಲಿನ ‘ದಾಸ’, ‘ಡಿ ಬಾಸ್’, ‘ದಚ್ಚು’ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡು ಇಂದಿಗೆ 22 ವರುಷ.
‘‘ಮೆಜೆಸ್ಟಿಕ್’ನಲ್ಲಿ ಕಾಲಿಟ್ಟು.. ‘ಧ್ರುವ’ ತಾರೆಯಾಗಿ ಮಿಂಚಿ. ‘ಕಿಟ್ಟಿ’ ಅನ್ನೋ ಪಟ್ಟ ಗಿಟ್ಟಿಸ್ಕೊಂಡು ರೋಸ್ ಹಿಡಿದ ‘ಕರಿಯ’ ಇದೀಗ ಅಭಿಮಾನಿಗಳ ಪಾಲಿನ ‘ದಾಸ’. ಸ್ಯಾಂಡಲ್ವುಡ್ನ ‘ಸಾರಥಿ’ ‘ಚಕ್ರವರ್ತಿ’ಯಾಗಿ ಇಂದು ಕಾಟೇರನಾಗಿ ಮಿಂಚುತ್ತಿದ್ದಾರೆ.
ದರ್ಶನ್ ಅದೃಷ್ಟವನ್ನೇ ಬದಲಾಯಿಸಿದ ಚಿತ್ರ ಮೆಜೆಸ್ಟಿಕ್
ದರ್ಶನ್ ಅವರ ವೃತ್ತಿಬದುಕಿಗೆ ಹೊಸ ತಿರುವು ನೀಡಿದ ಚಿತ್ರ ‘ಮೆಜೆಸ್ಟಿಕ್’, ಪಿ.ಎನ್. ಸತ್ಯ ನಿರ್ದೇಶನದ ಈ ಸಿನಿಮಾದ ಶೂಟಿಂಗ್ ಶುರುವಾಗಿದ್ದು 2001ರಲ್ಲಿ. 2002ರ ಫೆ. 8ರಂದು ತೆರೆಕಂಡ ಈ ಸಿನಿಮಾ ದಚ್ಚು ಅವರ ಅದೃಷ್ಟವನ್ನು ಬದಲಾಯಿಸಿತು. ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರವೇ ಶತದಿನೋತ್ಸವ ಆಚರಿಸಿತು.
ರಕ್ಷಿತಾ ಜೊತೆಗೆ ನಟಿಸಿದ ‘ಕಲಾಸಿಪಾಳ್ಯ’ ಸಹಸೂಪರ್‌ಹಿಟ್ ಆಯಿತು. ಗಜ, ನನ್ನ ಪ್ರೀತಿಯ ರಾಮು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು. 2012ರಲ್ಲಿ ತೆರೆಕಂಡ ನಾಗಣ್ಣ ನಿರ್ದೇಶನದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ದರ್ಶನ್ ಅವರ ಅಭಿನಯಕ್ಕೆ ಕನ್ನಡಿ ಹಿಡಿಯಿತು. ಪೌರಾಣಿಕ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ದರ್ಶನ್ನಟನೆಯ 50ನೇ ಚಿತ್ರವಾಗಿದೆ.
ಲೈಟ್ಬಾಯ್ನಿಂದ ಹಿರೋ ಆದ ದಚ್ಚು
ರಂಗಭೂಮಿ, ಧಾರಾವಾಹಿಯಲ್ಲಿ ನಟಿಸಿ ಬಣ್ಣದಲೋಕ ಪ್ರವೇಶಿಸಿದ್ದ ದರ್ಶನ್ ಅವರು, ಛಾಯಾಗ್ರಾಹಕ ಬಿ.ಸಿ. ಗೌರಿಶಂಕರ್ ಬಳಿ ಅಸಿಸ್ಟೆಂಟ್ ಕ್ಯಾಮೆರಾಮನ್ ಆಗಿ ಕೆಲಕಾಲ ಕಾರ್ಯ ನಿರ್ವಹಿಸಿದ್ದರು. ಲೈಟ್‌ಬಾಯ್ ಆಗಿ ಚಿತ್ರರಂಗದಲ್ಲಿ ದುಡಿದಿದ್ದ ದರ್ಶನ್, ನಾಯಕನಾಗುವುದಕ್ಕೂ ಮುನ್ನ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು.
ದರ್ಶನ್ ಲಾಂಗ್ ಬೀಸಿ ‘‘ಮೆಜೆಸ್ಟಿಕ್’ ಚಿತ್ರದಲ್ಲಿ ಚರಿತ್ರೆ ಸೃಷ್ಟಿಸಿದ್ದರು
ಬೆಂಗಳೂರಿನ ಭೂಗತ ಲೋಕದ ಕತೆ ಆಧಾರಿತ ಈ ಸಿನಿಮಾದಲ್ಲಿ ದರ್ಶನ್ ಲಾಂಗ್ ಬೀಸಿ ಚರಿತ್ರೆ ಸೃಷ್ಟಿಸಿದ್ದರು. ಎಲ್ಲ ಸಿನಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಈ ಸಿನಿಮಾ ಯಶಸ್ವಿಯಾಗಿತ್ತು. ಇನ್ನೂ ಚಿತ್ರದ ಹಾಡುಗಳು ಸಹ ಅಷ್ಟೇ ಜನಪ್ರಿಯವಾದವು. ಇದೇ ಸಿನಿಮಾವನ್ನು ತೆಲುಗಿನಲ್ಲಿ ಚಾರ್ಮಿನಾರ್ ಎಂದು ರೀಮೇಕ್ ಕೂಡ ಮಾಡಲಾಯಿತು.
ಅನಾಥನಾಗಿರುವ ಬಾಲಕ, ದೊಡ್ಡವನಾದಾಗ ದರೋಡೆಕೋರನಾಗುತ್ತಾನೆ. ಈ ಪಾತ್ರಕ್ಕೆ ದರ್ಶನ್ ಅಕ್ಷರಶಃ ಜೀವ ತುಂಬಿದ್ದಾರೆ. ಅವರ ನಟನೆ ಪ್ರೇಕ್ಷಕರು ಮೂಕ ಮುಗ್ಧರಾಗುವಂತಿದೆ. ನಟಿ ರೇಖಾ ನಟಿಸಿದ ಈ ಸಿನಿಮಾ ಸಖತ್ ಹಿಟ್ ಕೊಟ್ಟಿತ್ತು